ಸುಳ್ಯ: ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ತುರ್ತು ಸಂದರ್ಭದಲ್ಲಿ ಚುಚ್ಚುಮದ್ದು ನೀಡುವ ವಿಧಾನದ ಬಗ್ಗೆ ವಿಚಾರ ಸಂಕಿರಣವನ್ನು ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಸಲಾಯಿತು. ಬಾಯಿ, ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಾ ವಿಭಾಗ
ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಡಿ. ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್ ವಿಚಾರ ಸಂಕಿರಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ದಿನ ಪೂರ್ತಿ ನಡೆದ ಶಿಬಿರದಲ್ಲಿ
ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ
ಗಾರ್ಡನ್ ಹಾಸ್ಪಿಟಲ್ ವೈದ್ಯಾಧಿಕಾರಿ ಡಾ. ಸಾಯಿಗೀತಾ ಜ್ಞಾನೇಶ್, ಹಾಗೂ ಎಸ್.ವಿ.ಎಂ ಆಸ್ಪತ್ರೆಯ ಡಾ. ಗಣೇಶ್ ಶರ್ಮ ಭಾಗವಹಿಸಿ ಮಾಹಿತಿ, ತರಬೇತಿ ನೀಡಿದರು. ಬಾಯಿ, ಮುಖ ಮತ್ತು ದವಡೆ ಶಸ್ತ್ರಚಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ಮಹಾಬಲೇಶ್ವರ ಸಿ.ಎಚ್. ರವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಡಾ. ರಚನಾ ಪಿ.ಬಿ. ವಂದಿಸಿದರು. ಕಾರ್ಯಕ್ರಮದಲ್ಲಿ ಚುಚ್ಚುಮದ್ದು ನೀಡುವ ವಿವಿಧ ವಿಧಾನಗಳ ಬಗ್ಗೆ ಪ್ರಾತ್ಯಕ್ಷತೆ ನೀಡಲಾಯಿತು. ವಿದ್ಯಾರ್ಥಿಗಳು ಚುಚ್ಚುಮದ್ದು ನೀಡುವ ವಿವಿಧ ವಿಧಾನಗಳನ್ನು ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಅಭ್ಯಸಿಸಿದರು. ಈ ವಿಚಾರ ಸಂಕಿರಣವನ್ಬು ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಯಿತು. ಒಟ್ಟು ೧೦೦ ಹೌಸ್ ಸರ್ಜನ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಡಾ. ದಿಬಾಕರ್ ಸೂತ್ರದಾರ್ ಹಾಗೂ ಡಾ. ಸಂದೀಪ್ ಸಹಕರಿಸಿದರು.