ಅರಂತೋಡು:ತೋಡಿಕಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಎಸ್ಎನ್ಎಲ್ ಟವರ್ ನೆಟ್ವರ್ಕ್ ಸಮಸ್ಯೆ ಬಹಳ ವರ್ಷಗಳಿಂದ ಆ ಭಾಗದ ನಾಗರಿಕ ಬಂಧುಗಳಿಗೆ ಸಮಸ್ಯೆಯಾಗಿತ್ತು.ಈ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡಿದ ಎಲ್ಲರಿಗೂ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಹೇಳಿದ್ದಾರೆ. ಬಿಎಸ್ಎನ್ಎಲ್ ಟವರ್ಗೆ
ಹೊಸ ಬ್ಯಾಟರಿ ಅಳವಡಿಸಿ ಜನರ ಸಮಸ್ಯೆಯನ್ನು ಪರಿಹರಿಸಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ, ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್, ನಿರಂತರ ಸಮಸ್ಯೆಯ ಅರಿವನ್ನು ಮೂಡಿಸಿ ಬೆಂಬಲಿಸಿದ ಎಲ್ಲಾ ಮಾಧ್ಯಮದ ಮಿತ್ರರಿಗೆ ಮತ್ತು ಸಮಸ್ಯೆಯ ನಿವಾರಣೆಯ ಹೋರಾಟದ ನೇತೃತ್ವವನ್ನು ವಹಿಸಿದ ಯುವ ನೇತಾರ ಸಂತೋಷ್ ಕುತ್ತಮೊಟ್ಟೆ ಹಾಗೂ ತಂಡದವರಿಗೆ ಮತ್ತು ಆ ಭಾಗದ ಜನಪ್ರತಿನಿಧಿಗಳಿಗೆ, ಸಹಕರಿಸಿದ ಎಲ್ಲರಿಗೂ ಸ್ಥಳೀಯ ಸರಕಾರವಾದ ಅರಂತೋಡು ಗ್ರಾಮ ಪಂಚಾಯತ್ ಆಡಳಿತದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.