ಕಾಸರಗೋಡು:ಕೇರಳದಲ್ಲಿ ಆಡಳಿತಾರೂಢ ಸಿಪಿಐಎಂ ನೇತೃತ್ವದ ಎಲ್ಡಿಎಫ್ಗೆ ಲೋಕಸಭಾ ಚುನಾವಣೆಯಲ್ಲಿ ಭಾರೀ ಹಿನ್ನಡೆ. ರಾಜ್ಯದ 20 ಕ್ಷೇತ್ರದಲ್ಲಿ ಎಲ್ಡಿಎಫ್ಗೆ ದೊರೆತಿರುವುದು ಕೇವಲ ಒಂದು
ಸ್ಥಾನ ಮಾತ್ರ. ಯುಡಿಎಫ್ 18 ಸ್ಥಾನಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿದೆ. ಒಂದು ಸ್ಥಾನ ಗೆಲ್ಲುವ ಮೂಲಕ ಎನ್ಡಿಎ ಕೇರಳದಲ್ಲಿ ಖಾತೆ ತೆರೆದಿದೆ. ಕಾಸರಗೋಡಿನಲ್ಲಿ ರಾಜ್ಮೋಹನ್ ಉಣ್ಣಿತ್ತಾನ್ 84,780 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ವಯನಾಡಿನಲ್ಲಿ ರಾಹುಲ್ ಗಾಂಧಿ 3,64, 422 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ತ್ರಿಶೂರ್ನಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ 74,684 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆಲತ್ತೂರು ಕ್ಷೇತ್ರದಲ್ಲಿ ಸಚಿವ ಕೆ.ರಾಧಾಕೃಷ್ಣನ್ ಮೂಲಕ ಗೆದ್ದ ಎಲ್ಡಿಎಫ್ ಏಕೈಕ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.