ಸುಳ್ಯ:ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ
ಸಂಭ್ರಮ, ಸಡಗರದಿಂದ ನಡೆಯುತಿದೆ. ಮಾ.15ರಂದು ಆರಂಭಗೊಂಡು 18ರ ತನಕ ನಡೆಯುತ್ತಿದೆ. ಮಾ.17ರಂದು ಸಂಜೆಯಿಂದ

ದೈವಂಕಟ್ಟು ಮಹೋತ್ಸವದ ಅಂಗವಾಗಿ ಸಂಜೆ ಶ್ರೀ ಕಾರ್ನವನ್ ದೈವದ ವೆಳ್ಳಾಟಂ ಹಾಗೂ ಶ್ರೀಕೋರಚ್ಚನ್ ದೈವದ ವೆಳ್ಳಾಟಂ ನಡೆಯಿತು. ಕೇರಳ, ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿದ್ದಾರೆ.



