ಪಂಜ:ಶ್ರೀ ಮದ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಮಹಾ ಸ್ವಾಮಿಗಳ ಪೂರ್ಣ ಅನುಗ್ರಹದೊಂದಿಗೆ ಬಾನ್ಕುಳಿ ಮಠದಲ್ಲಿ ಜರುಗಲಿರುವ ಶಂಕರ ಪಂಚಮಿಯ ಪೂರ್ವಭಾವಿಯಾಗಿ ಶ್ರೀ ಶಂಕರ ಭಗವತ್ಪಾದರ ದಿವ್ಯ ಸಂದೇಶವನ್ನು ಜನಮನಕ್ಕೆ ಸಾರುತ್ತಾ ಸಂಚರಿಸುತ್ತಿರುವ ಶ್ರೀ ಶಂಕರಮಹಾಪಾದುಕಾ ಅದ್ವೈತ ರಥವು
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಪೂರ್ಣಕುಂಭ ಸ್ವಾಗತ,ಶಂಖ ಜಾಗಟೆಯೊಂದಿಗೆ ಸ್ವಾಗತ ನೀಡಲಾಯಿತು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ಮತ್ತು ಮಹೇಶ್ ಭಟ್ ಕುಡುಪಿಲ ಶ್ರೀಪಾದುಕೆಗೆ ಹಾರಾರ್ಪಣೆ ಮಾಡಿದರು.

ಶ್ರೀ ಪಾದುಕಾ ಪೂಜೆಯನ್ನು ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ನೆರವೇರಿಸಿದರು. ಆಗಮಿಸಿದ ಭಕ್ತಾದಿಗಳು ಪುಷ್ಪಾರ್ಚನೆ ಮಾಡಿದರು.
ಹವ್ಯಕ ವಲಯದ ಕಾರ್ಯದರ್ಶಿಗಳಾದ ಶಿವಕುಮಾರ ಬಿಳಿನೆಲೆ, ಉಪಾಧ್ಯಕ್ಷ ಶ್ರೀಶ ಭಟ್ ಕರಿಕಳ,ಪ್ರಸನ್ನ ಭಟ್ ಕುಂಞಿಹಿತ್ಲು, ಡಾ.ವೆಂಕಟೇಶ್ ಗಿರಿ ಮಂಜುಳಗಿರಿ ಮತ್ತು ಪದಾಧಿಕಾರಿಗಳು ಹಾಗೂ ಗುರು ಬಂಧುಗಳು ಭಾಗವಹಿಸಿದ್ದರು.