ಸುಳ್ಯ: ಕರಿಕೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿದ್ದ
ಬಿ.ಡಿ.ದೇವರಾಜ್, ಕೆ.ಕೆ.ಜಗದೀಶ್, ಕೆ.ಪಿ.ಸುಬ್ರಹ್ಮಣ್ಯ, ರೆಲ್ಸನ್ ಎಂ.ಎಂ, ಹಕ್ಕೀಂ ಎ.ಯು, ಪುರುಷೋತ್ತಮ ಬಿ.ಕೆ, ವಿನೋದ್.ಪಿ.ಟಿ, ಶ್ರೀನಿವಾಸ್ ಟಿ.ಆರ್, ಎ.ಪಿ.ಜೀವನ್ ಕುಮಾರ್, ಧನ್ಯ ಶ್ರೀಕುಮಾರ್, ಸರಸ್ವತಿ. ಕೆ.ಪಿ, ಜಯಂತ ಸೋಣಂಗೇರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ಕೆಪಿಸಿಸಿ ಸದಸ್ಯ ಬಿ.ಎಸ್.ರಮಾನಾಥ್, ವಲಯ ಕಾಂಗ್ರೆಸ್ ಅಧ್ಯಕ್ಷ ಬಿ.ಡಿ.ದೇವರಾಜ್,ಸಹಕಾರ ಸಂಘದ ಅಧ್ಯಕ್ಷ ಬಿ.ಟಿ.ಶರಣ್ ಕುಮಾರ್ ಕಾಂಗ್ರೆಸ್ ಚುನಾವಣಾ ನೇತೃತ್ವ ವಹಿಸಿದ್ದರು.