ಸುಳ್ಯ: ಕ್ಯಾಂಪ್ಕೋ ಹಾಗೂ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಭಾಗಿತ್ವದಲ್ಲಿ ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಸದಸ್ಯ ಬೆಳೆಗಾರರ ಸಭೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಯಾಂಪ್ಕೋ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಅವರು ಕಾಳುಮೆಣಸು ಖರೀದಿಗೆ
ಚಾಲನೆ ನೀಡಿದರು. ಕ್ಯಾಂಪ್ಕೋದ ಬೆನ್ನೆಲುಬಾದ ರೈತರ ಮೂಲಕ ದೀಪ ಬೆಳಗಿಸಲಾಯಿತು. ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಅವರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್. ಎಂ. ಕೃಷ್ಣಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದಸ್ಯರ ಜೊತೆ ಸಂವಾದ:
ಬಳಿಕ ಸದಸ್ಯ ಬೆಳೆಗಾರರ ಜೊತೆ ನಡೆದ ವಿಚಾರ ವಿನಿಮಯದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ರೈತರ ಸಮಸ್ಯೆಗಳನ್ನು ಆಲಿಸಿ ಸಮರ್ಪಕ ಪರಿಹಾರಗಳನ್ನು ಸೂಚಿಸಿದರು. ಮಾರುಕಟ್ಟೆ ಸ್ಥಿರತೆಯಲ್ಲಿ ಕ್ಯಾಂಪ್ಕೋದ ಪಾತ್ರ ಹಾಗೂ ಸದಸ್ಯರಿಗೆ ಕ್ಯಾಂಪ್ಕೋದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಶರಣ್ ಕುಮಾರ್ ಬೇಕಲ್ ಅವರು ಸಭೆಯಲ್ಲಿ ಮಾತನಾಡಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು.