ಸುಳ್ಯ:87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು ನ.9ರಂದು ಸುಳ್ಯಕ್ಕೆ ಆಗಮಿಸಿತು. ತಾಲೂಕು ಆಡಳಿತ, ನಗರ ಪಂಚಾಯತ್, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸುಳ್ಯದ ಜ್ಯೋತಿ ವೃತ್ತದ ಬಳಿಯಲ್ಲಿ ಸ್ವಾಗತ ನೀಡಲಾಯಿತು. ರಥವನ್ನು ಸ್ವಾಗತಿಸಿ, ಕನ್ನಡ
ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಲಾಯಿತು.
ತಹಶೀಲ್ದಾರ್ ಎಂ.ಮಂಜುಳ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕಸಾಪ ಜಿಲ್ಲಾಧ್ಯಕ್ಷ ಶ್ರೀನಾಥ್ ಎಂ.ಪಿ, ಸುಳ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ.ಮತ್ತಿತರರು ರಥಕ್ಕೆ
ಮಾಲಾರ್ಪಣೆ ಮಾಡಿ ಸ್ವಾಗತ ನೀಡಿದರು. ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ, ಗ್ರೇಡ್ 2 ತಹಶೀಲ್ದಾರ್ ಎಂ.ಮಂಜುನಾಥ್, ನ.ಪಂ.ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಪ್ರಮುಖರಾದ ಪ್ರೊ.ದಾಮೋದರ ಗೌಡ, ಪ್ರೊ.ಸಂಜೀವ ಕುದ್ಪಾಜೆ, ಕೇಶವ ಮಾಸ್ತರ್, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಸುಧಾಕರ, ದಯಾನಂದ ಆಳ್ವ, ರಾಮಚಂದ್ರ ಪಲ್ಲತ್ತಡ್ಕ, ಜಯಾನಂದ ಪೆರಾಜೆ, ಪ್ರಭಾಕರನ್ ನಾಯರ್ ಸಿ.ಎಚ್, ಅವಿನ್ ರಂಗತ್ತಮಲೆ, ರಾಮಕೃಷ್ಣ ರೈ, ಶಶ್ಮಿ ಭಟ್ ಅಜ್ಜಾವರ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಉಷಾ ಚಂದ್ರಶೇಖರ ಪೇರಾಲು, ಧನಲಕ್ಷ್ಮಿ ಕುದ್ಪಾಜೆ, ಮಮತಾ ಪಡ್ಡಂಬೈಲು ಗೋಪಿನಾಥ ಮೆತ್ತಡ್ಕ, ಚಂದ್ರಶೇಖರ ನಂಜೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿಗಳು, ಕಸಾಲಪ ಪದಾಧಿಕಾರಿಗಳು ಭಾಗವಹಿಸಿದ್ದರು.