ಕಲ್ಲಪ್ಪಳ್ಳಿ: ಕಮ್ಮಾಡಿಯ ಪತ್ತುಕುಡಿ ಕಾಳಜಿ ಕೇಂದ್ರಕ್ಕೆ ಮತ್ತು ಮಾರಾಟಚೇರಿ ಕಾಳಜಿ ಕೇಂದ್ರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು,
ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಪರಪ್ಪೆ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ, ಪನತ್ತಡಿ ವಿಲೇಜ್ ಆಫೀಸರ್ ರೈನಿ, ಸ್ಪೆಷಲ್
ವಿಲೇಜ್ ಆಫೀಸರ್ ಶೆಣೈ ,ಕೃಷಿ ಆಫೀಸರ್ ಅರುಣ್ ಜೋಸ್, ಆಶಾ ವರ್ಕರ್ ಬಿನ್ಸಿ ಐಸಾಕ್, ಪ್ರಮೋಟರ್ ಕರುಣಾಕರ, ಕಮ್ಮಾಡಿ ಅಂಗನವಾಡಿ ಟೀಚರ್ ರೋಹಿಣಿ, ಬಿನುವರ್ಗೀಸ್ ಪಾಣತ್ತೂರು, ಜಯಪ್ರಕಾಶ್, ಚಿದಾನಂದ ಮತ್ತಿತರರು ಭೇಟಿ ನೀಡಿದರು.
ಪತ್ತುಕುಡಿಯ ಕಾಳಜಿ ಕೇಂದ್ರದಲ್ಲಿ 8 ಮನೆಯ 26 ಮಂದಿ ಹಾಗೂ ಮರಾಠಿಚೇರಿಯ ಕಾಳಜಿ ಕೇಂದ್ರದಲ್ಲಿ 9 ಮನೆಯ 31 ಮಂದಿ ಇದ್ದಾರೆ. ಇವರಿಗೆ ಅಗತ್ಯ ವಸ್ತುಗಳನ್ನು ಒದಗಿಸಿ ಎರಡು ದಿವಸಗಳು ಇದೇ ಕೇಂದ್ರಗಳಲ್ಲಿ ಇರುವಂತೆ ಸೂಚಿಸಲಾಯಿತು.