ಕಲ್ಮಡ್ಕ:ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉದಯ ಕುಮಾರ್ ಬೆಟ್ಟ ಅವರ ನೇತೃತ್ವದ ಸಮನ್ವಯ ರಂಗ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಏರಿದ್ದಾರೆ. ಸಹಕಾರ ರಂಗದ ಅಭ್ಯರ್ಥಿಗಳು ಎರಡು ಸ್ಥಾನದಲ್ಲಿ ವಿಜೇತರಾಗಿದ್ದಾರೆ.ಉದಯ ಕುಮಾರ್ ಬೆಟ್ಟ ಅವರ ನೇತೃತ್ವದ ಸಮನ್ವಯ ರಂಗದ
ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಸಾಮಾನ್ಯ ಸ್ಥಾನದಿಂದ ಪಿ. ಉದಯಕುಮಾರ್ ಬೆಟ್ಟ, ತೃಪ್ತಿ ಯು, ರವಿಕಿರಣ ಎ, ಹರೀಶ್ ಎಂ ಮಾಳಪ್ಪಮಕ್ಕಿ, ಅಶೋಕ್ ಗೋಳ್ತಾಜೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ವಿಶ್ವನಾಥ ಬೊಳಿಯೂರು, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಯು ರಾಮ ನಾಯ್ಕ ಉಡುವೆಕೋಡಿ,, ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಿಂದ ಮಹೇಶ್ ಆಕ್ರಿಕಟ್ಟೆ ,ಮಹಿಳಾ ಮೀಸಲು ಸ್ಥಾನದಿಂದ ಮೀನಾಕ್ಷಿ ಬೊಮ್ಮೆಟಿ,ಸುಧಾ ಎಸ್ ಭಟ್ ಮೇಲಿನಮನೆ ವಿಜೇತರಾದರು.ಸಹಕಾರ ರಂಗದ ಅಭ್ಯರ್ಥಿಗಳಾಗಿ ಸಾಮಾನ್ಯ ಸ್ಥಾನದಿಂದ ಎಂ ಬಾಲಕೃಷ್ಣ ಮೂಲೆಮನೆ,
ಹಿಂದುಳಿದ ವರ್ಗ ಪ್ರವರ್ಗ ಎ ಸ್ಥಾನದಿಂದ ಗೋಪಾಲ ಪಿ ಪೆರಿಯಪ್ಪು ವಿಜೇತರಾದರು.