ಕಳಂಜ: ಕಳಂಜದ ವಿದ್ಯಾನಿಕೇತನ ಶಿಶುಮಂದಿರದ ‘ಚಿಣ್ಣರ ಹಬ್ಬ ಜ. 13ರಂದು ಜರುಗಿತು. ಮಗುವನ್ನು ಸಂಸ್ಕಾರವಂತನನ್ನಾಗಿ ಬೆಳೆಸುವಲ್ಲಿ ಶಿಶುಮಂದಿರಗಳ ಪಾತ್ರ ಹಿರಿದಾದುದು. ದಿಕ್ಸೂಚಿ ಭಾಷಣ ಮಾಡಿದ ಪುತ್ತೂರಿನ ವಿವೇಕಾನಂದ ವಿದ್ಯಾ ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿವೆಂಕಟ್ರಮಣ ರಾವ್ ಮಂಕುಡೆ
‘ಪಂಚಮುಖಿ ಶಿಕ್ಷಣ ಮಗುವಿಗೆ ಎಳವೆಯಲ್ಲಿಯೇ ಸಿಕ್ಕಾಗ ಆ ಮಗು ತನ್ನ
ಸರ್ವತೋಮುಖ ಬೆಳವಣಿಗೆಯೊಂದಿಗೆ, ಅದು ಮುಂದೆ ಸಮಾಜಕ್ಕೆ ದಾರಿ ದೀಪವಾಗಬಲ್ಲುದು. ಅದಕ್ಕಾಗಿ ಇಂತಹ ಶಿಶುಮಂದಿರಗಳ ಅಗತ್ಯ ಇದೆ ಎಂದು ಹೇಳಿದರು. ಕೊಡಗು ಕರಿಕೆಯ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪಲ್ಲವಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಗುವಿನ ಬೆಳವಣಿಗೆಯಲ್ಲಿ ತಾಯಂದಿರ ಪಾತ್ರದ ಬಗ್ಗೆ ಮಾತನಾಡಿದರು.
ಶ್ರೀ ಭಾರತೀ ಸೇವಾ ಸಮಿತಿಯ ಅಧ್ಯಕ್ಷ ರವಿಪ್ರಸಾದ ರೈ ಕಳಂಜ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಅಜಯ್ ಆದಾಳ ಸ್ವಾಗತಿಸಿದರು, ವ್ಯವಸ್ಥಾಪಿಕಾ ಮಾಲಿನಿಪ್ರಸಾದ್ ವರದಿ ವಾಚಿಸಿದರು. ಕೋಶಾಧಿಕಾರಿ ಸೀತಾರಾಮ ಕಂಚಿಕಾರಮೂಲೆ ಧನ್ಯವಾದ ಸಮರ್ಪಿಸಿದರು. ಅಜಿತ್ ರಾವ್ ಕೆ ಕಾರ್ಯಕ್ರಮ ನಿರೂಪಿಸಿದರು.

ಶಿಶುಮಂದಿರದ ಪುಟಾಣಿಗಳ ಪ್ರತಿಭಾ ದರ್ಶನ, ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಯೋಗ ಪ್ರದರ್ಶನ, ಮಾತೆಯರಿಂದ ಹಾಡು, ನೃತ್ಯ ವೈವಿಧ್ಯ ಜರುಗಿತು. ಕೊನೆಯಲ್ಲಿ ಶಿಶುಮಂದಿರದ ಹಿರಿಯ ವಿದ್ಯಾರ್ಥಿಗಳಾದ ಶಾಂಭವಿ ದಡ್ಡಾಲಡ್ಕ, ಹಾಗೂ ಅಭಿಜ್ಞಾ ನಾಟಿಕೇರಿ ತಂಡದವರಿಂದ ಯಕ್ಷ. – ಗಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕ ದುರ್ಗಾಪೂಜೆ, ಚಂಡಿಕಾಹವನ ಏರ್ಪಡಿಸಲಾಗಿತ್ತು ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಊರವರು ಭಾಗವಹಿಸಿದ್ದರು.