ಸುಳ್ಯ:ಆಫಲ್ ಐಫೋನ್ನ ಅತ್ಯಂತ ಲೇಟೆಸ್ಟ್ ಮೋಡೆಲ್ iPhone 16 Series ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಸುಳ್ಯದ ಬ್ರಾಂಡೆಡ್ ಮೊಬೈಲ್ಗಳ ಶೋರೂಮ್ ಪ್ರತಿಷ್ಠಿತ ಮೊಬೈಲ್ ಮಾರಾಟ ಮಳಿಗೆ ‘ಮೊಬೈಲ್ ಗ್ಯಾರೇಜ್ನಲ್ಲಿ iPhone 16 ಸೀರಿಯಸ್ನ ಬಿಡುಗಡೆ ಮತ್ತು ಮೊದಲ ಮಾರಾಟ ಸೆ.20 ರಂದು ನಡೆಯಿತು. ಹೊಸ ಮೋಡೆಲ್ನ
ಐಫೋನ್ಗೆ ಮೊಬೈಲ್ ಗ್ಯಾರೇಜ್ನಲ್ಲಿ ಗ್ರಾಹಕರಿಂದ ಬುಕ್ಕಿಂಗ್ ಮಾಡುವುದು ಮುಂದುವರಿದಿದೆ.ಗ್ರಾಹಕರು 8105100465 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ iPhone 16 Series ಮೊಬೈಲ್ ಬುಕ್ಕಿಂಗ್ ಮಾಡಬಹುದು. iPhone16 ದರ ರೂ.79,900 ನಿಂದ ಆರಂಭಗೊಳ್ಳುತ್ತದೆ.
iPhone 16 plus ರೂ. 89,900, iPhone 16 pro 119,900,iPhone 16 proMax 144,900 ನಿಂದ ಆರಂಭಗೊಳ್ಳುತ್ತದೆ. ಮೊಬೈಲ್ ಗ್ಯಾರೇಜ್ನಲ್ಲಿ ಬುಕ್ ಮಾಡಿ ಕನಸಿನ ಐಫೋನ್ ನಿಮ್ಮದಾಗಿಸಿಕೊಳ್ಳಬಹುದು. ಮೊಬೈಲ್ ಖರೀದಿಗೆ ಇಎಂಐ ವ್ಯವಸ್ಥೆ ಇದೆ. ಓಣಂ ಹಬ್ಬದ ಪ್ರಯುಕ್ತ ಮೊಬೈಲ್ ಗ್ಯಾರೇಜ್ನಲ್ಲಿ ಸ್ಮಾರ್ಟ್ ಫೋನ್ ಖರೀದಿಗೆ ವಿಶೇಷ ಆಫರ್ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಭಾರತದಲ್ಲಿ ಐಫೋನ್ನ 16 ಮಾರಾಟ ಆರಂಭ:ವಿಶೇಷತೆಗಳೇನು.?
ಇತ್ತೀಚೆಗೆ ಬಿಡುಗಡೆಯಾದ ಆ್ಯಪಲ್ ಕಂಪನಿಯ ಐಫೋನ್ನ 16ನೇ ಸರಣಿಯ ವಿವಿಧ ಸ್ಮಾರ್ಟ್ಫೋನ್ಗಳ ಮಾರಾಟ ಭಾರತದಲ್ಲಿ ಸೆ. 20ರಿಂದ ಆರಂಭವಾಗಿದೆ.ಇದೇ ಮೊದಲ ಬಾರಿಗೆ ಹಿಂದಿನ ಆವೃತ್ತಿಯ ದುಬಾರಿ ಮಾದರಿಯ ಫೋನ್ನ ಬೆಲೆಗಿಂತ ಅಗ್ಗದ ಬೆಲೆಗೆ 16 ಸರಣಿಯ ಐಫೋನ್ ಪ್ರೊ ಸರಣಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ. ಐಫೋನ್ 16 ಪ್ರೊ ಬೆಲೆ 1,19,900 ಲಕ್ಷ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ 1.44,900ಗೆ ಲಭ್ಯ’ ಎಂದು ಕಂಪನಿ ಹೇಳಿದೆ.
ವರ್ಷದ ಹಿಂದೆ ಬಿಡುಗಡೆಯಾದ ಐಫೋನ್ 15 ಪ್ರೊ ಹಾಗೂ ಐಫೋನ್
15 ಪ್ರೊ ಮ್ಯಾಕ್ಸ್ ಬೆಲೆಯು ಕ್ರಮವಾಗಿ 1.34 ಲಕ್ಷ ಹಾಗೂ 1.59 ಲಕ್ಷ ಇತ್ತು. ಐಫೋನ್ 16 ಪ್ರೊ ಹಾಗೂ ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್ಗಳು 128ಜಿಬಿ, 256ಜಿಬಿ, 512ಜಿಬಿ ಹಾಗೂ 1 ಟಿಬಿ ಸೃತಿಕೋಶ ಸಾಮರ್ಥ್ಯದೊಂದಿಗೆ ಲಭ್ಯ. ಈವರೆಗಿನ ಐಫೋನ್ಗಳಲ್ಲೇ ಅತಿ ದೊಡ್ಡ ಡಿಸ್ಪ್ಲೇ 6.3 ಇಂಚು ಹಾಗೂ 6.9 ಇಂಚಿನ ಪರದೆಯುಳ್ಳ ಫೋನ್ಗಳು ಇವಾಗಿವೆ.ಐಫೋನ್ 16ರ ಬೆಲೆ 79,900ರಿಂದ ಆರಂಭವಾದರೆ, 16 ಪ್ಲಸ್ ಫೋನ್ ಬೆಲೆ 89,900ರಿಂದ ಲಭ್ಯ. ಈ ಫೋನ್ಗಳು 128ಜಿಬಿ, 256ಜಿಬಿ, 512ಜಿಬಿ ಸ್ಮೃತಿಕೋಶದ ಸಾಮರ್ಥ್ಯದೊಂದಿಗೆ ಲಭ್ಯ’ ಎಂದು ಕಂಪನಿ ಹೇಳಿದೆ.
ಹೊಸ ಐಫೋನ್ 16 ಪ್ರೊ ಸರಣಿಯ ಫೋನ್ಗಳಲ್ಲಿ ಎ18 ಪ್ರೊ ಚಿಪ್ ಹಾಗೂ 6 ಕೋರ್ ಜಿಪಿಯು ಚಿಪ್ಸೆಟ್ ಇದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆ. ಎ18 ಚಿಪ್ಸೆಟ್ ಹಿಂದಿನ 15 ಸರಣಿಯ ಫೋನ್ಗಳಿಗಿಂತ ಶೇ 20ರಷ್ಟು ವೇಗ ಹೊಂದಿದೆ ಎಂದು ಕಂಪನಿ ಹೇಳಿದೆ.