ಸಿಡ್ನಿ: ಇಂಗ್ಲೆಂಡ್ ವಿರುದ್ಧ ಇದೇ ತಿಂಗಳ 22 ರಿಂದ ಭಾರತ ಏಕದಿನ ಮತ್ತು ಟಿ20 ಪಂದ್ಯಗಳ ಸರಣಿ ಆಡಲಿದೆ.ಇಂಗ್ಲೆಂಡ್ ತಂಡದ ಭಾರತ ಪ್ರವಾಸವು ಜನವರಿ 22 ರಂದು ಆರಂಭವಾಗಲಿದೆ. ಪ್ರವಾಸಿ ತಂಡವು ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಈಸೀಮಿತ ಓವರುಗಳ ಕ್ರಿಕೆಟ್ ಸರಣಿಯ ಬಹುತೇಕ ಪಂದ್ಯಗಳಿಗೆ
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಫೆ. 19ರಂದು ಆರಂಭವಾಗುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಈಗ
ಬೆನ್ನುನೋವಿಗೆ ಒಳಗಾಗಿರುವ ಜಸ್ಪ್ರೀತ್ ಬೂಮ್ರಾ ಅವರಿಗೆ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರುಗಳ ಕ್ರಿಕೆಟ್ ಸರಣಿಯ ಬಹುತೇಕ ಪಂದ್ಯಗಳಿಗೆ ವಿಶ್ರಾಂತಿ ನೀಡುವ ನಿರೀಕ್ಷೆಯಿದೆ. 30 ವರ್ಷ ವಯಸ್ಸಿನ ಬೂಮ್ರಾ ಬಾರ್ಡರ್– ಗಾವಸ್ಕರ್ ಟ್ರೋಫಿ ಸರಣಿಯಲ್ಲಿ 150ಕ್ಕೂ ಅಧಿಕ ಓವರುಗಳನ್ನು ಮಾಡಿದ್ದರು. 32 ವಿಕೆಟ್ಗಳನ್ನು ಪಡೆದು ಸರಣಿಯಲ್ಲಿ ಯಶಸ್ವಿ ಬೌಲರ್ ಎನಿಸಿದ್ದರು. ಭಾರತ ತಂಡದ ಯಶಸ್ಸಿನಲ್ಲಿ ಅವರ ಪಾತ್ರ ಪ್ರಮುಖವಾಗಿರುವ ಕಾರಣ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಅವರು ತಂಡಕ್ಕೆ ಮರಳಲಿದ್ದಾರೆ.
ಭಾರತ, ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯವನ್ನು ಫೆಬ್ರುವರಿ 20ರಂದು ದುಬೈನಲ್ಲಿ ಆಡಲಿದೆ.
ಅಹ್ಮದಾಬಾದಿನಲ್ಲಿ ಫೆ 12ರಂದು ನಡೆಯುವ ಸರಣಿಯ ಕೊನೆಯ ಪಂದ್ಯದಲ್ಲಿ ಅವರು ಫಿಟ್ನೆಸ್ ತಿಳಿದುಕೊಳ್ಳುವ ಉದ್ದೇಶದಿಂದ ಆಡಬಹುದು ಎನ್ನಲಾಗುತ್ತಿದೆ.