ಗುತ್ತಿಗಾರು:ಇಂಪಾರ್ಟೆಂಟ್ ಎಫ್ಸಿ ಗುತ್ತಿಗಾರು ವತಿಯಿಂದ ಮಾಸಿಕ ಸ್ವಚ್ಛತಾ ಅಭಿಯಾನ ಗುತ್ತಿಗಾರು ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆಯಿತು.ಯುವಜನ ಸಂಯುಕ್ತ ಮಂಡಳಿಯ ಪಂಚಸಪ್ತತಿ ಅಭಿಯಾನದಡಿಯಲ್ಲಿ
ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಇಂಪಾರ್ಟೆಂಟ್ ಎಫ್ಸಿ ಅಧ್ಯಕ್ಷ ಮುಳಿಯ ಸಾತ್ವಿಕ್ ಉದ್ಘಾಟಿಸಿದರು. ಆರೋಗ್ಯ ಕೇಂದ್ರದ ಅವರಣವನ್ನು ಸದಸ್ಯರು ಸ್ವಚ್ಛ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೌಶಿಕ್ ಶ್ಯಾಮ್, ಶ್ರೀಶರಣ್ ಮೊಗ್ರ, ಮೊನಿಶ್ ಬಾಕಿಲ, ನಿರ್ದೇಶಕ ಚರಣ್ ಕೊಂಬೊಟ್ಟು, ಸದಸ್ಯರು ಅನಿಲ್, ಹಮ್ಶಿಕ್, ರೆನ್ವಿತ್, ಜಸ್ವಿತ್ ಮತ್ತು ಇತರರು ಉಪಸ್ಥಿತರಿದ್ದರು.















