ಮಂಗಳೂರು: ಫೆ.27ರ ಅಂಕಿ ಅಂಶದಂತೆ ರಾಜ್ಯದಾದಂತ ಕಳೆದ 24 ಗಂಟೆಗಳ ಅವಧಿಯಲ್ಲಿ ತಾಪಮಾನ ಏರಿಕೆಯಾಗಿದ್ದು ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಮಾಹಿತಿ ನೀಡಿದೆ.ಉತ್ತರ ಕನ್ನಡ ಜಿಲ್ಲೆಯ ಸಾವಂತವಾಡ ಹೋಬಳಿಯು ರಾಜ್ಯದಲ್ಲಿಯೇ ಅತ್ಯಧಿಕ 41.1 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.ಉತ್ತರ ಕನ್ನಡ ಮತ್ತು
ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳು, ಉಡುಪಿ ಜಿಲ್ಲೆಗಳ ಅಲ್ಲಲ್ಲಿ ನಿನ್ನೆ 39.3’C ನಿಂದ 41.1°C ವರೆಗೆ ಗರಿಷ್ಠ, ತಾಪಮಾನ ದಾಖಲಾಗಿದೆ.
KSNDMC ಹವಾಮಾನ ಜಾಲದ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ 9 ಸ್ಥಳಗಳು, ದಕ್ಷಿಣ ಕನ್ನಡ ಜಿಲ್ಲೆಯ 4 ಸ್ಥಳಗಳು, ಉಡುಪಿ ಜಿಲ್ಲೆಯ 4 ಸ್ಥಳಗಳಲ್ಲಿ 39 *Cಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
ನಿನ್ನೆ ಗರಿಷ್ಠ ತಾಪಮಾನ; ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಮಾನ್ಯಕ್ಕಿಂತ ಹೆಚ್ಚು, (3.1 C ನಿಂದ 5.0 “). (1.6 ° C ನಿಂದ 3.0 C) ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಸಾಮಾನ್ಯ (-1.5 *C ನಿಂದ 1.5C) ತಾಪಮಾನ ದಾಖಲಾಗಿದೆ ಎಂದು ಕೆಎಸ್ಎನ್ಡಿ ಬುಲೆಟಿನ್ ತಿಳಿಸಿದೆ.
ಮುಂದಿನ 5 ದಿನಗಳ ತಾಪಮಾನದ ಮುನ್ಸೂಚನೆ;
ಬಿಸಿ ಗಾಳಿ ಪರಿಸ್ಥಿತಿಯು ಕರಾವಳಿ ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳ ಕಾಲ ಮುಂದುವರಿಯುವ ಸಂಭವವಿದೆ ಹಾಗೂ ಬಿಸಿ ಮತ್ತು ಈ ಪ್ರದೇಶಗಳಲ್ಲಿ ಬಿಸಿ ಮತ್ತು ಆರ್ದ್ರತೆಯಿಂದ ಕೂಡಿದಂತಹ ಪರಿಸ್ಥಿತಿಗಳು ಮುಂದಿನ 24 ಗಂಟೆಗಳ ಕಾಲ ಮುಂದುವರೆಯುವ ಸಾಧ್ಯತೆಗಳು ಇವೆ.ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ 5 ದಿನಗಳವರೆಗೆ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ. ಉತ್ತರ ಒಳನಾಡಿನಲ್ಲಿ ಮುಂದಿನ 2 ದಿನಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ ಮತ್ತು ನಂತರದ 3 ದಿನಗಳವರೆಗೆ 2-3 °C ಹೆಚ್ಚಳ.
ಫೆಬ್ರವರಿ 26, 2025 ರಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಾದಂತ ಗರಿಷ್ಠ ತಾಪಮಾನವು 39 C ನಿಂದ 41.1 C ವರೆಗೆ ದಾಖಲಾಗಿದೆ.ವಿವಿಧ ಸ್ಥಳಗಳಲ್ಲಿ ದಾಖಲಾದ ತಾಪಮಾನದ ಪಟ್ಟಿ
