ಪಂಜ:ಪಂಜ ಪರಿಸರದ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ವಲಯ ಅರಣ್ಯ ಅಧಿಕಾರಿಗಳಾಗಿ ಭಡ್ತಿಗೊಂಡ ಸಂತೋಷ್ ಕುಮಾರ್ ರೈಯವರಿಗೆ ಗೌರವಾರ್ಪಣೆ ಕಾರ್ಯಕ್ರಮ ಜೂ.1 ರಂದು ಪೂರ್ವಾಹ್ನ 10 ರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಸಭಾಧ್ಯಕ್ಷತೆಯನ್ನು
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ವಹಿಸಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ, ದೇವಳದ ಗೌರವ ಸಲಹೆಗಾರ ಆನಂದ ಗೌಡ ಕಂಬಳ ಅಭಿನಂದನಾ ಭಾಷಣ ಮಾಡಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 19 ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಗೌರವಾರ್ಪಣೆ ನಡೆಯಲಿದೆ. ಪ್ರಮುಖರಾದ ಮಹೇಶ್ ಕುಮಾರ್ ಕರಿಕ್ಕಳ,ಚಂದ್ರಶೇಖರ ಶಾಸ್ತ್ರಿ, ಕೇಶವ ಗೌಡ ಕುದ್ವ, ಚಂದ್ರಪ್ರಕಾಶ್ ಕಂಬಳ, ನೇಮಿರಾಜ್ ಪಲ್ಲೋಡಿ, ಕುಸುಮಾಧರ ಕರಿಮಜಲು, ಸವಿತಾರ ಮುಡೂರು, ಸುಮಾ ಕುದ್ವ, ಲಕ್ಷ್ಮಣ ಬೊಳ್ಳಾಜೆ, ನಾಗೇಶ್ ಕಿನ್ನಿಕುದ್ರು, ಬಾಲಕೃಷ್ಣ ಪುತ್ಯ, ಹಿತೇಶ್ ಪಂಜದಬೈಲು,ವಾಚಣ್ಣ ಕೆರೆಮೂಲೆ, ನಾಗಪ್ಪ ಗೌಡ ಪಂಜದಬೈಲು, ಬಾಲಕೃಷ್ಣ ಆಚಾರ್ಯ ಸಂಪ್ಯಾಡಿ, ನಿರ್ಮಲ ಕೆ.ಎಸ್.ಪಲ್ಲೋಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ವೇಳೆ ವೈಯಕ್ತಿಕವಾಗಿ ಗೌರವಾರ್ಪಣೆ ಮಾಡುವವರಿಗೂ ಅವಕಾಶವಿರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.