ಸುಳ್ಯ:ವಿಶ್ವ ಹಿಂದೂ ಪರಿಷದ್ ಭಜರಂಗದಳ, ಮಾತೃ ಶಕ್ತಿ ದುರ್ಗಾವಾಹಿನಿ ಅಯೋದ್ಯೆ ಶಾಖೆ ಎಲಿಮಲೆ ಇದರ ಆಶ್ರಯದಲ್ಲಿ 7ನೇ ವರ್ಷದ ಸಾರ್ವಜನಿಕ ಗೋ ಪೂಜಾ ಕಾರ್ಯಕ್ರಮ ಶನಿವಾರ ಜ್ಞಾನದೀಪ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಿತು. ಭಜನಾ ಕಾರ್ಯಕ್ರಮ ನಡೆದು ಬಳಿಕ
ಗೋಪೂಜೆ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದು ಪರಿಷದ್ ಭಜರಂಗದಳ ಅಯೋಧ್ಯೆ ಶಾಖೆ ಎಲಿಮಲೆ ಅಧ್ಯಕ್ಷ ಭೋಜಪ್ಪ ಗೌಡ ಹರ್ಲಡ್ಕ ವಹಿಸಿದ್ದರು. ಕಾರ್ಯಕ್ರಮವನ್ನು ಕೃಷಿಕ ಸುಬ್ರಮಣ್ಯ ಭಟ್ ಚಳ್ಳ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀದೇವಿ ದಿಕ್ಸೂಚಿ ಭಾಷಣ ಮಾಡಿದರು.ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಚಾಲಕರಾದ ಚಂದ್ರಶೇಖರ ತಳೂರು, ದೈವನರ್ತಕ ಚಿದಾನಂದ ಅಡ್ಡನಪಾರೆ, ವಿಶ್ವ ಹಿಂದು ಪರಿಷದ್ ಭಜರಂಗದಳ ಕಾರ್ಯದರ್ಶಿ ನವೀನ್ ಎಲಿಮಲೆ, ದುರ್ಗಾವಾಹಿನಿ ಸಂಯೋಜಕಿ ಜಯಂತಿ ಎಲಿಮಲೆ, ಮಾತೃ ಶಕ್ತಿ ಸಂಚಾಲಕಿ ಶಶಿಕಲಾ ಕಾಡುಜಬಳೆ, ಸಂಚಾಲಕ
ವಿಖ್ಯಾತ್ ಚಳ್ಳ, ಗೊರಕ್ಷಾ ಪ್ರಮುಖ್ ನಾಗರಾಜ್ ಕೇಪುಳಕಜೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪವರ್ ಮ್ಯಾನ್ ಚೇತನ್, ನಾಟಿ ವೈದ್ಯೆ ವಸಂತಿ, ದೇವಚಳ್ಳ ಶಾಲಾ ನಿವೃತ್ತ ಅಡುಗೆ ಸಹಾಯಕಿ ಶೇಷಮ್ಮ ಮಣಿಯೂರು ಅವರನ್ನು ಸನ್ಮಾನಿಸಲಾಯಿತು.ತಶ್ಮಿ ಪ್ರಾರ್ಥಿಸಿ ಯಕ್ಷಿತ್ ಚಳ್ಳ ಸ್ವಾಗತಿಸಿ ಸುನಿಲ್ ಸುಳ್ಳಿ ವಂದಿಸಿ ಉದಯ ಚಳ್ಳ ಕಾರ್ಯಕ್ರಮ ನಿರೂಪಿಸಿದರು.

















