ಗೂನಡ್ಕ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂನಡ್ಕ ಸಮೀಪ ಒಮ್ನಿ ಕಾರು ಮತ್ತು ಖಾಸಗಿ ಬಸ್ಸು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ 3 ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ತಡ ರಾತ್ರಿ ಸಂಭವಿಸಿದೆ. ಕಾಂಞಗಾಡಿನಿಂದ ಬೆಂಗಳೂರಿಗೆ ಹೋಗುತ್ತಿದ್ದ
ಖಾಸಗೀ ಬಸ್ಸು ಮತ್ತು ಮಡಿಕೇರಿ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸುಳ್ಯ ಆಂಬ್ಯುಲೆನ್ಸ್ ಚಾಲಕ ಮಾಲಕ ಸಂಘದ ಶಿವ, ರಫೀಕ್, ಪ್ರಶಾಂತ್, ತಾಜುದ್ದೀನ್ ಟರ್ಲಿ ಮತ್ತಿತರರು ಸಹಕರಿಸಿದ್ದಾರೆ. ಅಪಘಾತದಲ್ಲಿ ಓಮ್ನಿ ಕಾರು ಹಾಗೂ ಬಸ್ ಜಖಂಗೊಂಡಿದೆ