ಸುಳ್ಯ: ಮಕ್ಕಳ ವಸ್ತ್ರಗಳ ಕನಸಿನ ವಸ್ತ್ರ ಮಳಿಗೆ ಸುಳ್ಯದ ‘ಗೋಕುಲಂ’ ಕಿಡ್ಸ್ ವೇರ್’ಗೆ ಮೂರನೇ ವರ್ಷದ ಪಾದಾರ್ಪಣೆಯ ಸಂಭ್ರಮ. ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷದ ಪಾದಾರ್ಪಣೆ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ಗಳನ್ನೂ ಘೋಷಿಸಿದೆ. ಮೂರನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಗೋಕುಲಂನಲ್ಲಿ ವಸ್ತ್ರಗಳ ಖರೀದಿ ಮೇಲೆ ವಿಶೇಷ
ದರ ಕಡಿತ ಮಾರಾಟ ಘೋಷಿಸಿದೆ.
ಮೇ.20ರಿಂದ 30ರ ತನಕ ಈ ದರ ಕಡಿತ ಮಾರಾಟದ ಆಫರ್ ಇರಲಿದೆ.
ಪ್ರತಿ 750 ರೂ ಮೇಲಿನ ಖರೀದಿಯ ಮೇಲೆ ಶೇ.30 ದರ ಕಡಿತ ಮಾಡಿ ಮಾರಾಟ ಮಾಡಲಾಗುತ್ತದೆ. 750 ರೂಗಿಂತ ಕಡಿಮೆ ಮೊತ್ತದ ಖರೀದಿಗೆ ಶೇ.15 ದರ ಕಡಿತ ಮಾರಾಟ ಘೋಷಿಸಿದೆ. ಟ್ರಾಲಿ ಬ್ಯಾಗ್ನ ಮೇಲೆ ಶೇ.20 ದರ ಕಡಿತ ಮಾರಾಟ ಘೋಷಿಸಿದೆ.ಮಕ್ಕಳ ವೈವಿಧ್ಯಮಯ ವರ್ಣ
ವಸ್ತ್ರಗಳಿಗೆ ಹೆಸರುವಾಸಿಯಾಗಿರುವ ಸುಳ್ಯದ ಮುಖ್ಯ ರಸ್ತೆ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಸುಳ್ಯ ಫ್ಯಾಷನ್ ವೆಂಚರ್ನ ಸಂಸ್ಥೆ ‘ಗೋಕುಲಂ’ ವಲ್ಡ್ ಆಫ್ ಕಿಡ್ಸ್ವೇರ್’ ಮಳಿಗೆಯಲ್ಲಿ 0-16 ವಯಸ್ಸಿನವರೆಗಿನ ಎಲ್ಲಾ ಪ್ರಾಯದ ಮಕ್ಕಳಿಗೂ ಒದಗುವ ಆಕರ್ಷಕ ಬಣ್ಣ ಹಾಗು ವಿನ್ಯಾಸದ ವಸ್ತ್ರಗಳ ಅಪೂರ್ವ ಸಂಗ್ರವೇ ಇದೆ. ವಿವಿಧ ಕಂಪೆನಿಗಳ ಅತ್ಯಾಕರ್ಷಕ ವರ್ಣಮಯ ಬ್ರಾಂಡೆಡ್ ಮಕ್ಕಳ ಉಡುಪುಗಳ ಅದ್ಭುತ ಲೋಕವೇ ಇಲ್ಲಿ ತೆರೆದಿದೆ.ಆಧುನಿಕ ಹಾಗೂ ಸಾಂಪ್ರದಾಯಿಕ ಉಡುಪುಗಳ ದೊಡ್ಡ ಸಂಗ್ರಹವೇ ಇದೆ. ಟಿ ಶರ್ಟ್ಸ್, ಕಾಟನ್ ಪ್ಯಾಂಟ್, ಜೀನ್ಸ್ ಪ್ಯಾಂಟ್, ಕ್ಯಾಶ್ವಲ್ ವೆಯರ್, ಶಾರ್ಟ್ ಫ್ರಾಕ್ ಗೌನ್ ಹೀಗೆ ಎಲ್ಲಾ ತರಹದ ಅತ್ಯಾಕರ್ಷಕ ಬಟ್ಟೆಗಳ ಸಂಗ್ರಹವೇ ಇಲ್ಲಿದೆ.
ಗುಣಮಟ್ಟದ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ನೀಡುವ ಮೂಲಕ ಗೋಕುಲಂ ಕೆಲವೇ ವರ್ಷಗಳಲ್ಲಿ ಸುಳ್ಯದ ಬ್ರಾಂಡ್ ಆಗಿ ರೂಪುಗೊಂಡಿದೆ ಮತ್ತು ಸುಳ್ಯದ ಮನೆ ಮಾತಾಗಿದೆ. ಮಕ್ಕಳ ವಸ್ತ್ರ ಖರೀದಿಗೆ ಅತ್ಯುತ್ತಮ ಆಯ್ಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಮೂರನೇ ವರ್ಷದ ಪಾದಾರ್ಪಣೆ ಸಂಭ್ರಮ ಹೆಚ್ಚಿಸಲು ಭರ್ಜರಿ ಆಫರ್ ಘೋಷಿಸಿ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ಹವಾನಿಯಂತ್ರಿತ ಮಳಿಗೆ, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಗೋಕುಲಂನ ವಿಶೇಷತೆಯಾಗಿದೆ. ತಡವೇಕೆ ನಿಮ್ಮ ಮಕ್ಕಳ ಸಂತಸವನ್ನು ಹೆಚ್ಚಿಸಲು ವಸ್ತ್ರಗಳ ಈ ನಂದ ಗೋಕುಲಕ್ಕೆ ಒಮ್ಮೆ ಭೇಟಿ ಕೊಡಿ… ಮಕ್ಕಳ ಕನಸಿನ ಉಡುಪುಗಳನ್ನು ಖರೀದಿಸಿ.