ಸುಳ್ಯ: ಸುಳ್ಯ ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ ಪರಿಶೀಲನೆ ನಡೆಸಿದರು. ಕುರುಂಜಿಗುಡ್ಡೆಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಟ್ಯಾಂಕ್, ಶುದ್ದೀಕರಣ ಘಟಕದ
ನಿರ್ಮಾಣ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದರು. ಅಮೃತ್ 2 ಯೋಜನೆಯಡಿಯಲ್ಲಿ ಕುರುಂಜಿಗುಡ್ಡೆಯಲ್ಲಿ 5 ಲಕ್ಷ ಲೀಟರ್ನ ಬೃಹತ್ ಟ್ಯಾಂಕ್, ಶುದ್ದೀಕರಣ ಘಟಕ ನಿರ್ಮಾಣ ನಡೆಯುತಿದೆ. ನಗರದಲ್ಲಿ ವಿವಿಧ ಕಡೆಗಳಲ್ಲಿ ಟ್ಯಾಂಕ್ಗಳು, ಪೈಪ್ಲೈನ್ ಕಾಮಗಾರಿ, ಕಲ್ಲುಮುಟ್ಲುವಿನಿಂದ ಕುರುಂಜಿಗುಡ್ಡೆಗೆ ನೀರು ಸರಬರಾಜಿಗೆ ಎಕ್ಸ್ಪ್ರೆಸ್ ಲೈನ್ ಮತ್ತಿತರ ನಿರ್ಮಾಣ ನಡೆಯಲಿದೆ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಅವರು ಮಾಹಿತಿ ನೀಡಿದರು. ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ವಿಎ ತಿಪ್ಪೇಶಪ್ಪ, ಕೇಶವ ಮೊರಂಗಲ್ಲು ಮತ್ತಿತರರು ಉಪಸ್ಥಿತರಿದ್ದರು.