ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ಮಳೆಯಾಗಿದೆ. ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯದಿಂದ ಧಾರಾಕಾರ ಮಳೆಯಾಗಿದೆ. ಗುಡುಗು, ಸಿಡಿಲಿನ ಅಬ್ಬರದೊಂದಿಗೆ

ಮಳೆಯಾಗಿದ್ದು ರಸ್ತೆ, ಚರಂಡಿಯಲ್ಲಿ ನೀರು ತುಂಬಿ ಹರಿದಿದೆ.ಸುಳ್ಯ ನಗರದಲ್ಲಿಯೂ ಮಳೆ ಆರಂಭಗೊಂಡಿದ್ದು ಸಾಧಾರಣ ಮಳೆಯಾಗುತಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇದ್ದು ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.ಕೆಲವೆಡೆ ಉತ್ತಮ ಮಳೆಯಾದರೆ, ಕೆಲವೆಡೆ, ಸಾಧಾರಣ ಮಳೆಯಾಗಿದೆ. ಇನ್ನು ಕೆಲವೆಡೆ ಹನಿ ಮಳೆಯಷ್ಟೇ ಆಗಿದೆ.
