ಸುಳ್ಯ:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸುಳ್ಯ ಗಾಂಧಿ ಚಿಂತನಾ ವೇದಿಕೆ ವತಿಯಿಂದ ಗಾಂಧಿನಗರದ ಗಾಂಧಿಪಾರ್ಕ್ ನಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಗಾಂಧಿ ಸ್ಮರಣೆ ಕಾರ್ಯಕ್ರಮ ನಡೆಯಿತು.ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗಾಂಧಿ ಸ್ಮರಣೆ ಮಾಡಿದರು.ಸುಳ್ಯ ಗಾಂಧಿ ಚಿಂತನ ವೇದಿಕೆಯ
ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ್ ಪುಷ್ಪಾರ್ಚನೆ ಮಾಡಿದರು.ಸುಳ್ಯ ಮಹಾತ್ಮಾ ಗಾಂಧೀಜಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ,ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಂ.ಮುಸ್ತಫ ಗಾಂಧಿ ಸ್ಮರಣೆ ಮಾಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸೂಚಿಸಿದರು. ಸುಳ್ಯ ಗೌಡರ ಯುವ ಸೇವಾ ಸಂಫದ ಅಧ್ಯಕ್ಷ ಪಿ.ಎಸ್.ಗಂಗಾಧರ್, ನ.ಪಂ.ಸದಸ್ಯರಾದ ಉಮ್ಮರ್ ಕೆ.ಎಸ್., ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಧರ್ಮಪಾಲ ಕೊಯಿಂಗಾಜೆ, ಗಾಂಧಿ ಚಿಂತನ ವೇದಿಕೆಯ ಸಂಚಾಲಕ ದಿನೇಶ್ ಮಡಪ್ಪಾಡಿ, ಸಾಮಾಜಿಕ ಕಾರ್ಯಕರ್ತ ಡಿ.ಎಂ.ಶಾರಿಕ್, ಸ್ಥಳೀಯ ಮುಖಂಡರುಗಳಾದ ಚೋಮ ಎನ್.ಬಿ., ವಿನಯ್ ನಾವೂರು, ಮೇದಪ್ಪ ಕಾಯರ್ತೋಡಿ, ಆಶಿ ಕಲ್ಲುಮುಟ್ಲು, ಅಬ್ದುಲ್ ರಝಕ್ ಕರಾವಳಿ, ಹಮೀದ್ ಪ್ರಗತಿ, ಹಾಜಿ ಉಮರಬ್ಬ, ರಿಕ್ಷಾ ಚಾಲಕ ಮಾಲಕರ ಸಂಘ ಸ್ನೇಹ ಸಂಗಮದ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ ಮೊದಲಾದವರು ಉಪಸ್ಥಿತರಿದ್ದರು.
ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ವಂದಿಸಿದರು.