ಸುಳ್ಯ: ಸುಳ್ಯ ರೈತ ಉತ್ಪಾದಕ ಕಂಪೆನಿಯ ವಾರ್ಷಿಕ ಮಹಾಸಭೆಯು ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಅವರ ಅಧ್ಯಕ್ಷತೆಯಲ್ಲಿ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು. ಅಧ್ಯಕ್ಷ ವೀರಪ್ಪ ಗೌಡ ಮಾತನಾಡಿ ಕಂಪೆನಿ ಸ್ಥಾಪನೆಗೊಂಡ ಬಳಿಕ ಎರನೇ ಮಹಾ ಸಭೆ ನಟೆಯುತಿದೆ. ಕಳೆದ ವರ್ಷ 4 ಸಾವಿರ ಲಾಭಗಳಿಸಿದ್ದ ಸಂಸ್ಥೆ, ಎರಡನೇ ವರ್ಷದಲ್ಲಿ 4ಲಕ್ಷದ 82 ಸಾವಿರ ಲಾಭಗಳಿಸಿದೆ.ಆರಂಭದ ಮೂರು ವರ್ಷಗಳಲ್ಲಿ ಸಂಸ್ಥೆ ಗಳಿಸಿದ
ಲಾಭವನ್ನು ರಿಸರ್ವ್ ಫಂಡ್ ಆಗಿ ಇಡಲು ನಿರ್ಧರಿಸಿದ್ದೇವೆ. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಬೇಕು ಎಂದು ಹೇಳಿದರು. ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದರು.
ವರದಿ ಸಾಲಿನಲ್ಲಿ ಸಂಸ್ಥೆಯೊಂದಿಗೆ ಉತ್ತಮ ವ್ಯವಹಾರ ನಡೆಸಿದ ಸುಳ್ಯ ಸಿ.ಎ. ಬ್ಯಾಂಕ್ ಹಾಗೂ ಮಡಪ್ಪಾಡಿ ಸಹಕಾರಿ ಸಂಘಕ್ಕೆ ಉತ್ತಮ ಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ಪ್ರಶಸ್ತಿ ಸ್ವೀಕರಿಸಿದರೆ, ಮಡಪ್ಪಾಡಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಪ್ರಶಸ್ತಿ ಸ್ವೀಕರಿಸಿದರು. ವೈಯಕ್ತಿಕವಾಗಿ ಸಂಸ್ಥೆಯಲ್ಲಿ ಉತ್ತಮ ವ್ಯವಹಾರ ನಡೆಸಿದ ಸುಬ್ರಹ್ಮಣ್ಯ ಭಟ್ ಕಾವಿನಮೂಲೆ, ಈಶ್ವರ ಭಟ್ ಕಾವಿನಮೂಲೆ ಹಾಗೂ ದೇವರಾಜ್ ಆಳ್ವ ಅವರನ್ನು ಗೌರವಿಸಲಾಯಿತು.
ವಕೀಲ ಸುಕುಮಾರ್ ಕೋಡ್ತಗುಳಿ, ಸಂಪಾಜೆಯ ಕೃಷಿಕ ಕೆ.ಪಿ. ಜಗದೀಶ್, ಸುಳ್ಯ ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ಹಿರಿಯರಾದ ಬಾಪೂ ಸಾಹೇಬ್, ಗೋಪಾಲಕೃಷ್ಣ ಕುತ್ಯಾಳ, ಶಶಿಧರ ಪಡ್ಪು, ಮಂಜುನಾಥ ಮಡ್ತಿಲ, ಶರತ್ ಅಡ್ಕಾರ್, ಜಯಪ್ರಕಾಶ್ ನೆಕ್ರೆಪ್ಪಾಡಿ ಮಾತನಾಡಿ ಸಲಹೆ ನೀಡಿದರು.
ಅಟಲ್ ಇನ್ಕ್ಯೂಬೇಷನ್ ಸೆಂಟರ್ ಸಂಯೋಜಕಿ ದೀಕಾ, ತೋಟಗಾರಿಕಾ ಇಲಾಖೆಯ ಅಧಿಕಾರಿ ವಿಜೇತ್, ರೈತ ಉತ್ಪಾದಕ ಕಂಪೆನಿಯ ನಿರ್ದೇಶಕರುಗಳಾದ ಜಯರಾಮ ಮುಂಡೋಳಿಮೂಲೆ, ಮಧುರಾ ಎಂ.ಆರ್., ನೇತ್ರಕುಮಾರ ಕನಕಮಜಲು, ನೂಜಾಲು ಪದ್ಮನಾಭ ಗೌಡ, ಶ್ರೀಶಕುಮಾರ್ ಮಾಯಿಪಡ್ಕ , ಸತ್ಯಪ್ರಸಾದ್ ಅಮರಪಡ್ನೂರು, ಸುರೇಶ್ ರೈ ಬಾಳಿಲ, ದೇವರಾಜ್ ಆಳ್ವ , ರಾಮಕೃಷ್ಣ ಬೆಳ್ಳಾರೆ, ಲೋಹಿತ್ ಕೊಡಿಯಾಲ, ಅಮೃತ್ ರೈ ಮರ್ಕಂಜ, ಸಂತೋಷ್ ಕುಮಾರ್ ನಡುಮುಟ್ಲು, ಭಾಸ್ಕರನ್ ನಾಯರ್ ಅರಂಬೂರು, ಗೌರವ ಸಲಹೆಗಾರರಾದ ಡಾ.ರಂಗಯ್ಯ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಕೆ ವರದಿ ವಾಚಿಸಿದರು.