ಕಲ್ಲಪಳ್ಳಿ:ಗಡಿ ಪ್ರದೇಶವಾದ ಕಲ್ಲಪಳ್ಳಿಯ ವಿವಿಧ ಭಾಗಗಳಲ್ಲಿ ಚಿರತೆ ಹಾವಳಿ ಮತ್ತೆ ಹೆಚ್ಚಿದೆ. ಕಲ್ಲಪಳ್ಳಿ ದೊಡ್ಡಮನೆಯ ಬಾಬು ಎಂಬವರ ಮನೆಯ ಸಾಕು ನಾಯಿಯನ್ನು ಕಳೆದ ರಾತ್ರಿ ಚಿರತೆ ಹೊತ್ತೊಯ್ದಿದೆ. ತಡರಾತ್ರಿ ಶಬ್ದ ಕೇಳಿ ಮನೆಯವರು ಎಚ್ಚರಗೊಂಡು ನೋಡಿದಾಗ ನಾಯಿ ನಾಪತ್ತೆಯಾಗಿದೆ. ಸ್ಥಳದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದೆ. ಅರಣ್ಯ ಇಲಾಖೆಯ
ಅಧಿಕಾರಿಗಳು, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲ್ಲಪಳ್ಳಿಯ ಬೀರುದಂಡು, ಆನೆಗುಂಡಿ, ಮಾಂಬಳ, ರಂಗತ್ತಮಲೆ, ದೊಡ್ಡಮನೆ ಮತ್ತಿತರ ಕಾಡಂಚಿನ ಭಾಗಗಳಲ್ಲಿ ಹುಲಿ, ಚಿರತೆಗಳ ಉಪಟಳ ಹೆಚ್ಟಾಗಿದೆ. ಇಲ್ಲಿ ಮನೆಗಳಿಂದ ಸಾಕು ನಾಯಿ, ದನ ಕರುಗಳ ಮೇಲೆ ಚಿರತೆ, ಹುಲಿ ದಾಳಿ ಮಾಡಿ ಸಾಕು ಪ್ರಾಣಿಗಳನ್ನು

ಹೊತ್ತೊಯ್ಯುವುದು, ಅವುಗಳನ್ನು ಕೊಂದು ಹಾಕುವುದು ಕಂಡು
ಬಂದಿದೆ.ಹಲವು ತಿಂಗಳಿನಿಂದ ಈ ರೀತಿ ಚಿರತೆಗಳ ಉಪಟಳ ಕಂಡು ಬಂದಿದೆ. ಕೆಲವು ಕಡೆ ಮನೆಗಳ ನಾಯಿಗಳ ಮೇಲೆ ದಾಳಿ ಮಾಡುವುದು, ಕೋಳಿಗಳು ನಾಪತ್ತೆಯಾಗಿದೆ. ಕೆಲವು ಕಡೆ ದನ ಕರುಗಳ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಲ್ಲಪಳ್ಳಿಯ ವಿವಿಧ ಭಾಗಗಳಲ್ಲಿ ಚಿರತೆ, ಹುಲಿ ಹಾವಳಿ ವಿಪರೀತ ಆಗಿದ್ದು ಮನೆಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಪ್ರತಿ ದಿವಸ ದಾಳಿ ಮಾಡುತ್ತಿವೆ, ಹಲವು ಮನೆಗಳಿಂದ ನಾಯಿ ಕೋಳಿ ಇನ್ನಿತರ ಸಾಕು ಪ್ರಾಣಿಗಳು ನಾಪತ್ತೆ ಆಗಿರುತ್ತದೆ.
ಹುಲಿ, ಚಿರತೆ ಹಾವಳಿ ತಡೆಯಲು ಮತ್ತು ಜನರ ಆತಂಕ ದೂರ ಮಾಡಲು ಅರಣ್ಯ ಇಲಾಖೆ, ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಆಗ್ರಹಿಸಿದ್ದಾರೆ.














