ಕಲ್ಲುಗುಂಡಿ: ಜನವರಿ 5 ರಂದು ಗೂನಡ್ಕ ಸಜ್ಜನ ಸಮುದಾಯ ಭವನದಲ್ಲಿ ನಡೆಯಲಿರುವ ಅಂತರ್ ರಾಜ್ಯದ ಮಟ್ಟದ ಹೊನಲು ಬೆಳಕಿನ ಸಂಪಾಜೆ ದಫ್ ಸ್ಪರ್ಧೆ ಕಾರ್ಯಕ್ರಮದ ಅಂತಿಮ ಹಂತದ ತಯಾರಿ ಬಗ್ಗೆ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಕಲ್ಲುಗುಂಡಿ ಹೋಟೆಲ್ ಕರಾವಳಿ ಹಮ್ಮಿಕೊಳ್ಳಲಾಯಿತು.ಸಭೆಯಲ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಉಮ್ಮರ್ ಬೀಜದಕಟ್ಟೆ ಆಗಮಿಸಿ ಕಾರ್ಯಕ್ರಮದ ವಿವರಗಳನ್ನು ಪಡೆದು
ಸಲಹೆ ಸೂಚನೆ ನೀಡಿದರು.ಕಾರ್ಯಕ್ರಮದ ಪ್ರಧಾನ ಸಂಯೋಜಕ ಜಿ ಕೆ ಹಮೀದ್ ಮಾತನಾಡಿ ಕಾರ್ಯಕ್ರಮದ ಯಶಸ್ವಿಗಾಗಿ ಹಲವು ಉಪ ಸಮಿತಿ ರಚಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು. ಸಂಪಾಜೆ ಗ್ರಾಮದಲ್ಲಿ ಇಸ್ಲಾಮಿಕ್ ಕಲಾ ಪದ್ದತಿಯನ್ನು ಸಾರುವ ದಫ್ ಸ್ಪರ್ಧೆಯು ಅತ್ಯಂತ ಉತ್ತಮ ರೀತಿಯಲ್ಲಿ ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ ಹನೀಫ, ರಫೀಕ್ ಕೆ ಎಮ್,ಹನೀಫ್ ಮೊಟ್ಟೆಂಗಾರ್, ರಫೀಕ್ ಕರಾವಳಿ, ಹಸೈನಾರ್ ಚಟ್ಟೆಕಲ್ಲು, ರಝಾಕ್ ಸೂಪರ್, ಉಮ್ಮರ್ ತಾಜ್, ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಶನ್ನ ಪದಾಧಿಕಾರಿಗಳಾದ ಉಮ್ಮರ್ ಕೆ ಎಸ್, ಕಲಂದರ್ ಎಲಿಮಲೆ, ನೀಝಾರ್ ಶಾಂತಿನಗರ, ರಶೀದ್ ಜಟ್ಟಿಪಳ್ಳ ಉಪಸ್ಥಿತರಿದ್ದರು. ಜ.5ರಂದು ಸಂಜೆ 4 ಗಂಟೆಗೆ ದಫ್ ಮೆರವಣಿಗೆ ಆಕರ್ಷಕ ಪ್ಲವರ್ ಶೋ, ವೈವಿಧ್ಯಮಯ ಕಾರ್ಯಕ್ರಗಳೊಂದಿಗೆ ತಾಲೂಕು ಹಾಗೂ ರಾಜ್ಯ ಮಟ್ಟದ ಸ್ಪರ್ಧ ನಡೆಸುವ ಬಗ್ಗೆ ಚರ್ಚಿಸಲಾಯಿತು.