ಸುಳ್ಯ:ವಿವಿಧ ಕಾರ್ಯಕ್ರಮಗಳ ನಿಮಿತ್ತ ದುಬೈ ಪ್ರವಾಸದಲ್ಲಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆಯವರಿಗೆ ಸುಳ್ಯ ಗೂನಡ್ಕ ಫ್ರೆಂಡ್ಸ್ ಪೋರ್ ಎವರ್ ವತಿಯಿಂದ ಸನ್ಮಾನ ಕಾರ್ಯಕ್ರಮ ದುಬೈ ಅಲ್ ಬರಹಾ ಪ್ಯಾಲೇಸ್ನಲ್ಲಿ
ನಡೆಯಿತು.ಇದೇ ಸಂದರ್ಭದಲ್ಲಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.ದುಬೈ ಹಿರಿಯ ಉದ್ಯಮಿ ರಹೀಮ್ ಪೇರಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಅಲ್ ಪರ್ದಾನ್ ಗ್ರೂಪ್ಸ್ನ ವ್ಯವಸ್ಥಾಪಕ ರಿಪಾಯಿ ಗೂನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಹೀದ್ ಬಿಳಿಯಾರು,ಯೂನಸ್ ಗೂನಡ್ಕ, ತಾಜುದ್ದೀನ್ ಗೂನಡ್ಕ, ಅಜರುದ್ದೀನ್ ಗೂನಡ್ಕ, ಸೀರಾಜುದ್ದೀನ್ ಗೂನಡ್ಕ, ಪೈಸಲ್ ಬೀಜದಕಟ್ಟೆ, ಅಜ್ಮಲ್ ಸಿನಾನ್ ಗೂನಡ್ಕ, ಅನ್ವರ್ ಶಿರೂರ್,ಅಖಿಲ್ ಉಳ್ಳಾಲ,ಝಿಯಾದ್ ಅರಂತೋಡು ಟ್ರೇಮೊಂಟಿನ ಸಂಸ್ಥೆಯ ವ್ಯವಸ್ಥಾಪಕ ಬದ್ರುದ್ದೀನ್ ಗೂನಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.