ನಾರ್ತ್ ಹಡ್ಸನ್: ಉತ್ತರ ಅಮೆರಿ ಸೇರಿ ವಿವಿಧ ದೇಶಗಳ ಸಾವಿರಾರು ಜನರು, ಸೋಮವಾರ ಪೂರ್ಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡರು.ಈ ಸೂರ್ಯಗ್ರಹಣ ವೀಕ್ಷಣೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ನಾಸಾ ಸೂರ್ಯಗ್ರಹಣ ವೀಕ್ಷಣೆಗಾಗಿ ವಿಶೇಷ ವ್ಯವಸ್ಥೆಯನ್ನು ಏರ್ಪಡಿಸಿತ್ತು. 2017ರ ಬಳಿಕ ಉತ್ತರ ಅಮೆರಿಕದ
ಮೊದಲ ಪೂರ್ಣ ಗ್ರಹಣ ಇದಾಗಿದೆ. ನ್ಯೂಯಾರ್ಕ್ನಲ್ಲೂ ಸೂರ್ಯ ಗ್ರಹಣದ ದೃಶ್ಯಗಳನ್ನು ಸೆರೆ ಹಿಡಿಯಲಾಯಿತು.ಭಾರತದ ಕಾಲಮಾನ ಸೋಮವಾರ ಮಧ್ಯರಾತ್ರಿ ಸೂರ್ಯಗ್ರಹಣ ನಡೆದಿದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗಿಲ್ಲ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಉತ್ತರ ಅಮೆರಿಕ, ಮೆಕ್ಸಿಕೊ, ಕೆನಡಾ, ಯುಎಸ್ನ ವಿವಿಧ ಭಾಗಗಳಲ್ಲಿ ಸೂರ್ಯಗ್ರಹಣ ಗೋಚರಿಸಿದೆ. ಇದು 2024ರ ಐತಿಹಾಸಿಕ ಖಗೋಳ ವಿಸ್ಮಯವಾಗಿದೆ. ಆದರೆ ಭಾರತದಲ್ಲಿ ಎಲ್ಲೂ ಗೋಚರ ಆಗಲಿಲ್ಲ.