ಒಮಾನ್: ಮಸ್ಕತ್ ಪ್ರವಾಸದಲ್ಲಿರುವ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ ದಕ ಜಿಲ್ಲೆಯ ಸುಳ್ಯದವರ ಅನಿವಾಸಿ ಸಂಘಟನೆಯಾದ ಅನ್ಸಾರುಲ್ ಮಸಾಕೀನ್ ಅಸೋಸಿಯೇಷನ್ ಮಸ್ಕತ್ ಇದರ ವತಿಯಿಂದ ಸನ್ಮಾನಿಸಲಾಯಿತು. ಮಸ್ಕತ್ ನ ಅಸ್ಮಾ ಅಲ್-ಝವಾವಿ ಮಸೀದಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು
ಅನ್ಸಾರುಲ್ ಮಾಸಾಕೀನ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಅಬ್ದುಲ್ ರಶೀದ್ ಶಾಂತಿನಗರ ಸ್ವಾಗತಿಸಿದರು ಸನ್ಮಾನ ಸ್ವೀಕರಿಸಿದ ಟಿ.ಎಂ ಶಹೀದ್ ತೆಕ್ಕಿಲ್ ಸನ್ಮಾನಕ್ಕೆ ಧನ್ಯವಾದ ತಿಳಿಸಿದರು. ಅಶ್ರಫ್ ಭಾರತ್ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಫಯಾಝ್ ಪಾಜಪಳ್ಳ, ಅಬ್ಬಾಸ್ ಮರಕ್ಕಡ, ಸಾದಿಕ್ ಹೆಚ್.ಎಲ್.ಎಸ್, ಕಮರುದ್ದೀನ್ ಗೂನಡ್ಕ,ಸಹಿತ ಜಿಲ್ಲೆಯ ಹಲವಾರು ಯುವಕರು ಉಪಸ್ಥಿತರಿದ್ದರು.
ಮಸ್ಕತ್ ಕೆ ಎಂ ಸಿ ಸಿ ಅವರು ಮತ್ರ ಅಲ್ ಕುಬ್ರ ಮುನ್ಸಿಪಾಲ್ ಆಫೀಸ್ ರೂವಿಯಲ್ಲಿ ಏರ್ಪಡಿಸಿದ ಸಮುದಾಯ ಇಫ್ತಾರ್ ಕೂಟದಲ್ಲಿ ವಿಶೇಷ ಅತಿಥಿಯಾಗಿ ಟಿ.ಎಂ.ಶಹೀದ್ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಕೆ ಎಂ ಸಿ ಸಿ ಒಮಾನ್ ಅಧ್ಯಕ್ಷರಾದ ರಹೀಸ್ ಅಹಮದ್ ಅಧ್ಯಕ್ಷತೆ ವಹಿಸಿದ್ದರು.