ಕಾಬೂಲ್:ಅಫ್ಘಾನಿಸ್ತಾನ ಮತ್ತು ಫಿಲಿಪೈನ್ಸ್ನಲ್ಲಿ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 6.39ಕ್ಕೆ ಅಫ್ಘಾನಿಸ್ತಾನದಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಕಳೆದ 15 ದಿನಗಳಿಂದ ಸತತ ಭೂಕಂಪಗಳಿಂದ ಅಫ್ಘಾನಿಸ್ತಾನ ಜನ ತತ್ತರಿಸಿದ್ದಾರೆ. ಇದಕ್ಕೂ ಮೊದಲು
ಉಂಟಾದ ಭೂಕಂಪದಲ್ಲಿ 4ಸಾವಿರಕ್ಕೂ ಜನರು ಮೃತಪಟ್ಟಿದ್ದು, ಅನೇಕ ಕಟ್ಟಡಗಳು ನಾಶವಾಗಿವೆ.
ಫಿಲಿಪೈನ್ಸ್ನ ದಕ್ಷಿಣ ಮನಿಲಾ ನಗರದಲ್ಲಿ ಶುಕ್ರವಾರ ಬೆಳಿಗ್ಗೆ 8:24ಕ್ಕೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.2ರಷ್ಟು ದಾಖಲಾಗಿರುವುದಾಗಿ ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.ಭೂಕಂಪದ ತೀವ್ರತೆಗೆ ಹಲವಾರು ಕಟ್ಟಡಗಳು ಹಾನಿಗೊಳಗಾಗಿದ್ದು, ಸ್ಥಳೀಯರು ಜೀವ ಭಯದಲ್ಲಿದ್ದಾರೆ.