ಬೆಂಗಳೂರು : 161 ತಾಲೂಕುಗಳನ್ನು ತೀವ್ರ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ಸರಕಾರ ಆದೇಶ ಹೊರಡಿಸಿದೆ.ಬರಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಸಮೀಕ್ಷೆ ನಡೆಸಿ ರಾಜ್ಯದ 31 ಜಿಲ್ಲೆಗಳ
236 ತಾಲೂಕುಗಳ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸುತ್ತಿದ್ದೇವೆ. ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮಳೆ ಕೊರತೆಯ ಹಿನ್ನಲೆಯಲ್ಲಿ ಸರಕಾರ ಬರ ಪೀಡಿತ ಪ್ರದೇಶ ಎಂದು ವಿಂಗಡಿಸಿ ಘೋಷಿಸಲಾಗಿದೆ.