ಸುಳ್ಯ:ಬೆಳ್ಳಾರೆ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ವತಿಯಿಂದ ನಡೆಸಲ್ಪಡುವ ಹಿಫ್ಲ್ & ದರ್ಸ್ ವಿದ್ಯಾರ್ಥಿಗಳ ಮೇಲಂತಸ್ತಿನ ಹಾಸ್ಟೇಲ್ ಕಟ್ಟಡದ ಉದ್ಘಾಟನೆ ಜ.20 ರಂದು ನಡೆಯಲಿದೆ ಎಂದು ಎಜ್ಯುಕೇಷನ್ ಸೆಂಟರ್ನ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ ಬೆಳ್ಳಾರೆ ಹಾಗೂ ದಾರುಲ್ ಹಿಕ್ಮ ಸೌದಿ ನ್ಯಾಷನಲ್ ಕಮಿಟಿ ಕೋಶಾಧಿಕಾರಿ ಸಾಲಿಹ್ ಬೆಳ್ಳಾರೆ ‘ 2012 ರಲ್ಲಿ ಮತ ಮತ್ತು
ಲೌಕಿಕ ಸಮನ್ವಯ ಶಿಕ್ಷಣದ ಆಶಯದೊಂದಿಗೆ ಹುಟ್ಟಿಕೊಂಡ ವಿದ್ಯಾಸಂಸ್ಥೆ. ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಮೊದಲಿಗೆ ಹಿಫ್ಝುಲ್ ಖುರಾನ್ ಕಾಲೇಜು ಆರಂಭಗೊಳ್ಳುತ್ತದೆ. ನಂತರ ಪರಿಸರದ ಮಕ್ಕಳಿಗೆ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಅರೆಬಿಕ್ ಮದರಸ, 2014 ರಲ್ಲಿ ಬೆಳ್ಳಾರೆ ಮತ್ತು ಸುತ್ತಮುತ್ತಲಿನ ಮಕ್ಕಳಿಗಾಗಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆರಂಭಿಸಲಾಯಿತು.
ದಾರುಲ್ ಹಿಕ್ಮ ಸಂಸ್ಥೆಯ ಸಹಾಯಕ್ಕಾಗಿ ಸೌದಿ ಅರೇಬಿಯಾದ ರಿಯಾದ್ನಲ್ಲಿ ಗಲ್ಫ್ ಘಟಕ ಆರಂಭವಾಗಿ ಮುಂದೆ ವಿದೇಶದಲ್ಲಿ ಅನೇಕ ಪ್ರದೇಶಗಳಿಗೆ ವ್ಯಾಪಿಸಿದೆ. ಇದೀಗ ಸಯ್ಯದ್ ಕಾಜೂರ್ ತಂಙಳ್ ಅವರ ನೇತೃತ್ವದಲ್ಲಿ ಸಂಸ್ಥೆಯು ಅಭಿವೃದಿಯ ಪಥದಲ್ಲಿ ಮುನ್ನಡೆಯುತಿದೆ. ದಾರುಲ್ ಹಿಕ್ಮ ಸೌದಿ ನ್ಯಾಷನಲ್ ಸಮಿತಿ ಆರಂಭಿಸಿದ ಹಿಪ್ಲ್ ಮತ್ತು ದರ್ಸ್ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡದ ಕಾಮಗಾರಿ ಪೂರ್ತಿಗೊಂಡಿದ್ದು 2025 ಜನವರಿ 20 ಸಯ್ಯದ್ ಕಾಜೂರ್ ತಂಙಳ್ ಅವರ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯ ಹಾಗೂ ಸಂಸ್ಥೆಯಲ್ಲಿ ಕಲಿತು ಸಂಪೂರ್ಣವಾಗಿ ಖುರಾನ್ ಕಂಠಪಾಠ ಮಾಡಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಸನದುದಾನ ನಡೆಯಲಿದೆ.

ಹಾಸ್ಟೆಲ್ ಕಟ್ಟಡವನನ್ನು ಸಂಜೆ 4:30 ಕ್ಕೆ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮ ರಾತ್ರಿ 7:30ಕ್ಕೆ ಆರಂಭಗೊಳ್ಳಲಿದೆ. ಅಧ್ಯಕ್ಷತೆ ಮತ್ತು ಸನಾದುದಾನವನ್ನು ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕಾಜೂರ್ ನಿರ್ವಹಿಸಲಿದ್ದಾರೆ. ಮುಖ್ಯ ಪ್ರಭಾಷಣವನ್ನು ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ ಮಾಡಲಿದ್ದಾರೆ. ಇದಲ್ಲದೆ ಕಾರ್ಯಕ್ರಮದಲ್ಲಿ ಹಲವಾರು ಸಯ್ಯದರು, ಉಲಮಾಗಳು,ಉಮಾರಾ ನೇತಾರರು, ಗಲ್ಫ್ ಪ್ರತಿನಿಧಿಗಳು, ಉದ್ಯಮಿಗಳು, ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಸ್ವಾಗತ ಸಮಿತಿ ಚೇರ್ಮೇನ್ ಅಬ್ದುಲ್ ಹಮೀದ್ ಅಲ್ಫಾ, ಕನ್ವೀನರ್ ಮುಸ್ತಫಾ ಮಾಸ್ತಿಕಟ್ಟೆ, ಸೌದಿ ಕಮಿಟಿ ಸದಸ್ಯ ಹಾಜಿ ಯೂಸುಫ್ ಚೆನ್ನಾರ್
ಕಟ್ಟಡ ನಿರ್ಮಾಣ ಸಮಿತಿ ಉಸ್ತುವಾರಿ ಹಸ್ಸನ್ ಹಾಜಿ ಇಂದ್ರಾಜೆ ಉಪಸ್ಥಿತರಿದ್ದರು.