ಸುಳ್ಯ:ಸುಳ್ಯ ನಗರ ವ್ಯಾಪ್ತಿಯ ಬೂಡು ಪ.ಜಾತಿ ಕಾಲನಿಯಲ್ಲಿರುವ ಶ್ರೀ ದೈವಗಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು ನಡೆಯುತ್ತಿದ್ದು ಬೂಡು ಮತ್ತು ಕೆರೆಮೂಲೆ ಭಾಗದ ಬಿಜೆಪಿ ಕಾರ್ಯಕರ್ತರು ದೇಣಿಗೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು ರವರಿಗೆ ನಗದು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ
ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ ಕುಸುಮಾಧರ, ಬೂತ್ ಸಮಿತಿ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಹರೀಶ್ ಬೂಡುಪನ್ನೆ, ಲೋಕೇಶ್ ಕೆರೆಮೂಲೆ, ಜಗದೀಶ್ ಕೆರೆಮೂಲೆ, ಕಾಲನಿಯ ಮುಖ್ಯಸ್ಥ ಮಾಯಿಲ ಬೂಡು,ಮಾಧವ ಬೂಡು, ಜೀರ್ಣೋದ್ಧಾರ ಸಮಿತಿಯ ಪ್ರ.ಕಾರ್ಯದರ್ಶಿ ಪ್ರವೀಣ ಬೂಡು, ಪದ್ಮಪ್ಪ ಬೂಡು, ಪೂವಪ್ಪ ಬೂಡು, ಜನಾರ್ದನ ಬೂಡು, ವೆಂಕಪ್ಪ ಬೂಡು, ಆನಂದ ಬೂಡು, ಸುಂದರ ಬೂಡು, ಪ್ರವೀಣ್ ಬೂಡು, ರಂಜನ್ ಬೂಡು, ಹರೀಶ್, ಶಿವಪ್ರಸಾದ್ ಬೂಡು ಮತ್ತಿತರರು ಉಪಸ್ಥಿತರಿದ್ದರು. ಬೂಡು ರಾಧಾಕೃಷ್ಣ ರೈ ಸ್ವಾಗತಿಸಿ, ಹರೀಶ್ ಬೂಡು ಪನ್ನೆ ವಂದಿಸಿದರು.