ಹೈದರಾಬಾದ್: ಅಭಿಷೇಕ್ ಶರ್ಮಾ ಅವರ ಅರ್ಧ ಶತಕ ರಾಹುಲ್ ತ್ರಿಪಾಠಿ, ನಿರೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಬೆನ್ನಟ್ಟಿದ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು 4 ವಿಕೆಟ್ ಗೆಲುವು ದಾಖಲಿಸಿದೆ.
215 ರನ್ಗಳ ಗುರಿಯೊಂದಿಗೆ ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಪರ
ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 66 ರನ್ ಬಾರಿಸಿದರು. 18 ಎಸೆತಗಳನ್ನು ಎದುರಿಸಿದ ರಾಹುಲ್ ತ್ರಿಪಾಠಿ 33 ರನ್ ಗಳಿಸಿದರು. ನಿತೀಶ್ ರೆಡ್ಡಿ 25 ಎಸೆತಗಳಲ್ಲಿ 37 ರನ್ ಬಾರಿಸಿದರೆ, ಹೆನ್ರಿಚ್ ಕ್ಲಾಸೆನ್ 26ಎಸೆತಗಳಲ್ಲಿ 42 ರನ್ ಮಾಡಿದರು.ಪಂಜಾಬ್ ಪರ ಹರ್ಷದೀಪ್ ಹಾಗೂ ಹರ್ಷಲ್ ಪಟೇಲ್ ತಲಾ ಎರಡು ಹಾಗೂ ಶಶಾಂಕ್ ಸಿಂಗ್ ಒಂದು ವಿಕೆಟ್ ಪಡೆದರು.ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ 5 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು. ಅಥರ್ವ ತೈಡೆ 27 ಬಾಲ್ಗಳಲ್ಲಿ 46 ರನ್ ಗಳಿಸಿ ನಟರಾಜನ್ಗೆ ವಿಕೆಟ್ ಒಪ್ಪಿಸಿದರೆ, ಪ್ರಭ್ಸಿಮ್ರನ್ ಸಿಂಗ್ 45 ಎಸೆತಗಳಲ್ಲಿ 71 ರನ್ ಗಳಿಸಿದರು.ಮೂರನೇ ಕ್ರಮಾಂಕದಲ್ಲಿ ಬಂದ ರಿಲಿ ರಾಸ್ಸೋ 24 ಎಸೆತಗಳಲ್ಲಿ 49 ರನ್ ಬಾರಿಸಿ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ನಾಯಕ ಜಿತೇಶ್ ಶರ್ಮಾ ಔಟಾಗದೇ 32 ರನ್ ಗಳಿಸಿದರು.ಹೈದರಾಬಾದ್ ಪರ ನಟರಾಜನ್ ಹಾಗೂ ನಿತೀಶ್ ರೆಡ್ಡಿ ತಲಾ ಎರಡು ವಿಕೆಟ್ ಪಡೆದರು.