ಸುಳ್ಯ:ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು ರಾತ್ರಿ, ಹಗಲೆನ್ನದೆ ನಿರಂತರ ಮಳೆ ಸುರಿಯುತಿದೆ. ದಕ್ಷಿಣ ಕನ್ನಡಉತ್ತರ, ಕನ್ನಡ, ಉಡುಪಿ ಜಿಲ್ಲೆಗಳಿಗೆ ಜೂ.16 ರಿಂದ 18ರ ವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ
ಸೋಮವಾರ ಆರೆಂಜ್ ಅಲರ್ಟ್ ಘೋಷಿಸಿದರೆ, ಶಿವಮೊಗ್ಗ, ತುಮಕೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಸುಳ್ಯ ತಾಲೂಕಿನಲ್ಲಿಯೂ ಭಾರೀ ಮಳೆ ಮುಂದುವರಿದಿದೆ. ಮೂರು ದಿನಗಳಿಂದ ನಿರಂತರ ಮಳೆ ಮುಂದುವರಿದಿದೆ. ಭಾನುವಾರ ಹಗಲು,ರಾತ್ರಿ ಸುರಿದ ಭರ್ಜರಿ ಮಳೆ ಸೋಮವಾರವೂ ಮುಂದುವರಿದಿದ್ದು ಧಾರಾಕಾರ ಮಳೆಯಾಗುತಿದೆ.ಅಲ್ಲಲ್ಲಿ ಹಾನಿ ಕೂಡ ಸಂಭವಿಸಿದೆ.ಗಾಳಿ, ಮಳೆಗೆ ಮರದ ಕೊಂಬೆ ಮುರಿದು ಬಿದ್ದು ತಾಲೂಕು ಕಚೇರಿ ಸೌಧದ ಪಡಸಾಲೆಯ ಮೇಲೆ ಬಿದ್ದು ಹಂಚುಗಳಿಗೆ ಹಾನಿ ಉಂಟಾಗಿದೆ.ಸಮೀಪದ ರಿಕ್ಷಾ ನಿಲ್ದಾಣಕ್ಕೂ ಸಣ್ಣ ಪುಟ್ಟ ಹಾನಿ ಸಂಭವಿಸಿದೆ.