ಸುಳ್ಯ: ಸುಳ್ಯ-ಆಲೆಟ್ಟಿ ರಸ್ತೆಯಲ್ಲಿ ಗಾಂಧಿನಗರ ಸಮೀಪ ಗುರುಂಪು ಎಂಬಲ್ಲಿ ಕಾರೊಂದು ರಸ್ತೆ ಬದಿಯ ಕಂದಕಕ್ಕೆ ಮಗುಚಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ಸಂಭವಿಸಿದೆ. ರಸ್ತೆ ಬದಿಯ ಆಳದ ಕಂದಕಕ್ಕೆ ಕಾರು ಮಗುಚಿ ಬಿದ್ದಿಗೆ ಕಾರಿನಲ್ಲಿದ್ದವರು
ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿ 5 ಮಂದಿ ಪ್ರಯಾಣಿಕರು ಇದ್ದರು. ಇಬ್ಬರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಕಾರು ಜಖಂಗೊಂಡಿದೆ. ರಸ್ತೆಯ ಕೆಳ ಭಾಗದಲ್ಲಿ ಕಟ್ಟಡ ಹಾಗೂ ರಸ್ತೆ ಮಧ್ಯೆಯ ಕಂದಕಕ್ಕೆ ಕಾರು ನಿಯಂತ್ರಣ ತಪ್ಪಿ ಬಿದ್ದಿದೆ. ಕೆಳಭಾಗದಲ್ಲಿ ಇರುವ ಮನೆಯ ಗೋಡೆಗೂ ಹಾನಿಯಾಗಿದೆ. ಸುಳ್ಯ ಭಾಗದಿಂದ ಕೇರಳ ಕಡೆಗೆ ಕಾರು ಹೋಗುತ್ತಿತ್ತು ಎಂದು ತಿಳಿದು ಬಂದಿದೆ.