ಬೊಳುಬೈಲು:ಜಾಲ್ಸೂರು ಗ್ರಾಮ ಪಂಚಾಯತ್ ಮತ್ತು ನವಚೇತನ ಯುವಕ ಮಂಡಲ ಬೊಳುಬೈಲು ಇವರ ಸಹಭಾಗಿತ್ವದಲ್ಲಿ ಬೊಳುಬೈಲಿನಲ್ಲಿ ನಿರ್ಮಾಣಗೊಂಡ ನೂತನ ನವಚೇತನ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ಗೋಪಾಲ್ ಅಡ್ಕಾರು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ
ಗೀತಾ ಗೋಪಿನಾಥ್ ಬೊಳುಬೈಲು,ಗೀತಾ ಚಂದ್ರಹಾಸ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಅರ್ಭಡ್ಕ ಮತ್ತು ನಿರಂಜನ ಬೊಳುಬೈಲು ಮುಖ್ಯ ಅತಿಥಿಗಳಾಗಿದ್ದರು.
ನವಚೇತನ ಯುವಕ ಮಂಡಲದ ಅಧ್ಯಕ್ಷ ಪ್ರದೀಪ್ ಬೊಳುಬೈಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ಪದ್ಮನಾಭ ನೆಕ್ರಾಜೆ ಸ್ವಾಗತಿಸಿ, ನಿತಿನ್ ಕುಮಾರ್ ಅರ್ಭಡ್ಕ ವಂದಿಸಿದರು. ನಿರ್ದೇಶಕ ಪ್ರವೀಣ ಕಾಟೂರು ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಊರಿನ ಬಂಧುಗಳು ಉಪಸ್ಥಿತರಿದ್ದರು.














