ಮಂಗಳೂರು: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಮುಂದಿರಿಸಿ
ಭಾರತೀಯ ಮಜ್ದೂರ್ ಸಂಘದ ವತಿಯಿಂದ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಳ್ಯ ತಾಲೂಕಿನ ಬಿಎಂಎಸ್ ಸಂಯೋಜಿತ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು. ಸುಳ್ಯ ತಾಲೂಕಿನ
ಸುಳ್ಯ ನಗರ, ಕಲ್ಲುಗುಂಡಿ,ಪಂಜ, ಎಡಮಂಗಲ,ಗುತ್ತಿಗಾರು, ಸುಬ್ರಮಣ್ಯ,ಹರಿಹರ, ಕಲ್ಮಕಾರು, ಜಾಲ್ಸೂರು, ಕುಕ್ಕುಜಡ್ಕ, ಪೆರಾಜೆ, ಘಟಕಗಳಿಂದ ಆಟೋ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹುಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಾಲೂಕು
ಆಟೋ ಚಾಲಕರ ಅಧ್ಯಕ್ಷರಾದ ಪ್ರಕಾಶ್ ಎಂ ಎಸ್, ಪ್ರದಾನ ಕಾರ್ಯದರ್ಶಿ ನಾರಾಯಣ ಎಸ್ ಎಂ.ಪೈಚಾರ್, ಕೋಶಾಧಿಕಾರಿ ರವಿ ಎಸ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್, ನಿರ್ದೇಶಕರಾದ ಭಾನು ಪ್ರಕಾಶ್, ಲೋಕೇಶ್, ಶಂಕರ, ವೇಣುಗೋಪಾಲ, ಕಾರ್ತಿಕ್, ರೋಹಿತ್ ಜಯರಾಮ ಜನಾರ್ದನ, ಜಗದೀಶ್ ಎನ್.ಆರ್, ಭಾಸ್ಕರ, ವಿಶ್ವನಾಥ, ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ,ಮಾಜಿ ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ ಎಲ್ಲಾ ಘಟಕಗಳ ಪದಾಧಿಕಾರಿಗಳು ಸದಸ್ಯರು ಭಾಗಿಯಾಗಿದ್ದರು.








































