ಕಲ್ಲುಗುಂಡಿ: ಬಿ.ಎಂ.ಎಸ್ ಆಟೋ ಚಾಲಕರ ಸಂಘ ಕಲ್ಲುಗುಂಡಿ ಘಟಕದ ಮಾಸಿಕ ಸಭೆ ಕಲ್ಲುಗುಂಡಿ ವಿಷ್ಣು ಮೂರ್ತಿ ಗದ್ದೆಯ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಸತ್ಯನಾರಾಯಣ ಪೂಜೆಯ ಖರ್ಚು ವೆಚ್ಚಗಳ ಬಗ್ಗೆ ಮಂಡನೆ ಮಾಡಲಾಯಿತು. ಅಪಘಾತ ವಿಮೆ, ಸದಸ್ಯತ್ವ ಬಗ್ಗೆ
ಸಂಘದ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ಉಪಾಧ್ಯಕ್ಷ ಜಗದೀಶ್ ಗೂನಡ್ಕ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಗೌರವ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಜಿ,ನಿರ್ದೇಶಕರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.ಜಗದೀಶ್ ಕೊಯನಾಡು ಸ್ವಾಗತಿಸಿ.
ವಸಂತ ಎನ್.ಟಿ ವಂದಿಸಿದರು.