ಅಜ್ಜಾವರ: ಚೈತ್ರ ಯುವತಿ ಮಂಡಲಾಜ್ಜಾವರ ಹಾಗೂ
ಪ್ರತಾಪ ಯುವಕ ಮಂಡಲ ಅಜ್ಜಾವರ ವತಿಯಿಂದ ಬೆಳದಿಂಗಳ ಹರಟೆ ಅನ್ನುವ ವಿನೂತನವಾದ ಕಾರ್ಯಕ್ರಮ ನಡೆಯಿತು. ರಸಪ್ರಶ್ನೆ, ಹಾಡು,ನಾಲಿಗೆ ಸುರುಳಿ,ಹರಟೆ ಯೊಂದಿಗೆ, ಮನಸ್ಸಿಗೆ ಮುದ ನೀಡುವ ಕೆರೆದಂಡೆ ಆಟ ಹಾಗೂ ಮಧುರವಾದ ಹಳೆಯ ನೆನಪುಗಳನ್ನು ಮೆಲುಕು ಹಾಕುವ
ಕಾರ್ಯಕ್ರಮ ಸೂರ್ಯ ನಿಲಯ ಕಲ್ತಡ್ಕದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಯುವತಿ ಮಂಡಲ ಅಧ್ಯಕ್ಷೆ ಶಶ್ಮಿ ಭಟ್,ಕಾರ್ಯದರ್ಶಿ ಹರ್ಷಿತಾ,ಉಪಾಧ್ಯಕ್ಷೆ ಮಾಲತಿ, ಗೀತಾಂಜಲಿ ಗುರುರಾಜ್,ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ,ಕಾರ್ಯದರ್ಶಿ ನವೀನ್ ಕುಮಾರ್,ಖಜಾಂಜಿ ಲೋಕೇಶ್ ರಾವ್, ಗೌರವಾಸಲಹೆಗಾರ ಸೂರ್ಯಕುಮಾರ್, ಹಾಗೂ ಸದಸ್ಯರಾದ ಅಕ್ಷತ್ ಕುಮಾರ್, ಸುಧೀರ್
ಅಡ್ಪಂಗಾಯ , ವಿನೋದ್ ,ಉಷಾ ನವೀನ್,ಧರಿತ್ರಿ, ವೀಣಾ ಗೋರಡ್ಕ, ಶಾರದಾಮೋಹನ್, ಧನಲಕ್ಷ್ಮಿ ಉಪಸ್ಥಿತರಿದ್ದರು.ರಾತ್ರಿಯ ಭೋಜನದ ವ್ಯವಸ್ಥೆಯನ್ನು ಮಾಲತಿ ಸೂರ್ಯಕುಮಾರ್ ಮನೆಯವರು ಮಾಡಿದ್ದರು.














