ಸುಳ್ಯ:ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಸುಳ್ಯ, ಪಯಸ್ವಿನಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಸುಳ್ಯ ಇದರ ವತಿಯಿಂದ ಸಮಗ್ರ ಕೃಷಿ ಸಮುದಾಯ ಯೋಜನೆಯಡಿ ಅರಂತೋಡು ಪ್ರಕೃತಿ ವನಧನ ವಿಕಾಸ ಕೇಂದ್ರದಲ್ಲಿ
ಬಾಳೆ ದಿಂಡಿನ ನಾರು ತಯಾರಿಕಾ ಘಟಕದ ಉದ್ಘಾಟನೆ ಜೂ.11 ರಂದು ನಡೆಯಿತು. ನಾರು ತೆಗೆಯುವ ಯಂತ್ರವನ್ನು ದ.ಕ.ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಜಯರಾಮ್.ಕೆ.ಇ ಉದ್ಘಾಟಿಸಿದರು. ಹೊಲಿಗೆ ಯಂತ್ರವನ್ನು ಗ್ಯಾರಂಟಿ ಯೋಜನೆಗಳ ದ.ಕ.ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ನೇಯ್ಗೆ ಯಂತ್ರವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಜ್ಯೂಸ್ ತಯಾರಿಕಾ ಯಂತ್ರವನ್ನು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ ಉದ್ಘಾಟಿಸಿದರು. ಬಳಿಕ ನಡೆದ

ಸಮಾರಂಭದ ಅಧ್ಯಕ್ಷತೆಯನ್ನು ಆಲೆಟ್ಟಿ ಲಕ್ಷ್ಮೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷೆ ಸುಷ್ಮಾ ದಿನೇಶ್ ವಹಿಸಿದ್ದರು.ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಗ್ಯಾರಂಟಿ ಯೋಜನೆಗಳ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅರಂತೋಡು-ತೊಡಿಕಾನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಕೆವಿನ್ ಇಕೋ ಗ್ರೀನ್ ಪ್ರಾಡಕ್ಟ್ನ ವ್ಯವಸ್ಥಾಪಕ ನಿರ್ದೇಶಕ ಜಮೀನ್ ಪ್ರಭು, ಮಾಹೆ ವಿವಿಯ ಪ್ರಾಧ್ಯಾಪಕರು ಹಾಗು ವಿಭಾಗ ಮುಖ್ಯಸ್ಥರಾದ ಡಾ.ವಾಸುದೇವ, ಡಾ.ರಿತೇಶ್, ಕೃಷಿ ತಾಲೂಕು ವ್ಯವಸ್ಥಾಪಕರಾದ ವಿನೀತ್, ಮೂಲ್ಕಿ ತಾಲೂಕು ಮಟ್ಟದ

ಒಕ್ಕೂಟದ ಅಧ್ಯಕ್ಷೆ ಭಾನುಮತಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್.ಸ್ವಾಗತಿಸಿ, ಎನ್ಆರ್ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ.ವಿ.ಜಿ. ವಂದಿಸಿದರು. ಅರಂತೋಡು ದುರ್ಗಾಮಾತಾ ಗ್ರಾ.ಪಂ.ಒಕ್ಕೂಟದ ಸದಸ್ಯೆ ಕವಿತಾ ಪ್ರಾರ್ಥಿಸಿದರು. ಎನ್ಆರ್ಎಲ್ಎಂ ವಲಯ ಮೇಲ್ವಿಚಾರಕ ಮಹೇಶ್.ಬಿ. ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭಕ್ಕಿಂತ ಮೊದಲು ಬಾಳೆ ದಿಂಡಿನ ನಾರು ತಯಾರಿಕಾ ಘಟಕದ ಕುರಿತು ಕಿರು ಚಿತ್ರ ಪ್ರದರ್ಶಿಸಲಾಯಿತು.














