ಸುಳ್ಯ:ಸೌತ್ ಏಷ್ಯನ್ ಮಾಸ್ಟರ್ ಅತ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಸುಳ್ಯ ಜಟ್ಟಿಪಳ್ಳದ ಬಿ. ಎ. ಪಾಲಾಕ್ಷ ಅವರು ಚಿನ್ನದ ಪದಕ ಪಡೆದಿದ್ದಾರೆ. ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಸೌತ್ ಏಷ್ಯಾನ್ ಮಾಸ್ಟರ್ ಆತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ
ಭಾಗವಹಿಸಿ ಟ್ರಿಪಲ್ ಜಂಪ್ ನಲ್ಲಿ ಚಿನ್ನದ ಪದಕ ಪಡೆದುಕೊಂಡುರು.ಈ ಕ್ರೀಡಾ ಕೂಟದಲ್ಲಿ ಭಾರತ ಶ್ರೀಲಂಕಾ ಭೂತಾನ್, ನೇಪಾಳ, ಬಾಂಗ್ಲಾದೇಶಗಳ ಸುಮಾರು 1700ವಿವಿಧ ಕ್ರೀಡಾಪಟುಗಳು ಭಾಗವಹಿಸಿದರು.ಬಿ ಎ. ಪಾಲಾಕ್ಷ ಇವರು ಕೊಡಗು ಜೆಲ್ಲೆಯ ಮಡಿಕೇರಿಯ ಜಿಲ್ಲಾ ಪಾಲಿಕ್ಲಿನಿಕ್ನಲ್ಲಿ ಸೇವೆ ಸಲ್ಲಿಸುತ್ತಿದಾರೆ..