ಕಲ್ಲಪಳ್ಳಿ:ಗಡಿ ಪ್ರದೇಶವಾದ ಕಲ್ಲಪ್ಪಳ್ಳಿಯಲ್ಲಿ ಅರಣ್ಯ ಸಂರಕ್ಷಣಾ ಸಮಿತಿ ರಚಿಸಲಾಯಿತು. ಕಲ್ಲಪ್ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಞಂಗಾಡ್ ವಲಯ ಅರಣ್ಯಾಧಿಕಾರಿ ರಾಹುಲ್ ವಹಿಸಿದ್ದರು. ಪನತ್ತಡಿ ಗ್ರಾಮ ಪಂಚಾಯತ್
ಅಧ್ಯಕ್ಷೆ ಪ್ರಸನ್ನ ಪ್ರಸಾದ್ ಉದ್ಘಾಟಿಸಿದರು. ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ, ಗ್ರಾಮ ಪಂಚಾಯತ್ ಸದಸ್ಯ ಎ. ರಾಧಾಕೃಷ್ಣ ಕಲ್ಲಪಳ್ಳಿ ಶುಭ ಹಾರೈಸಿದರು.
ಸಭೆಯಲ್ಲಿ ನೂತನ ಅರಣ್ಯ ಸಂರಕ್ಷಣಾ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಜಯಪ್ರಕಾಶ್.ಎನ್.ಕೆ, ಆಯ್ಕೆಯಾದರು. ಸದಸ್ಯರಾಗಿ ಪಿ.ಎ.ಐಸಾಕ್, ದಾಮೋದರ ಪಿ.ಡಿ, ರಾಘವ ಪಾಡಿಕೋಚ್ಚಿ, ನಳಿನಾಕ್ಷಿ, ವಸಂತಿ ಪಾಡಿಕೋಚ್ಚಿ, ರೋಹಿಣಿ, ಜ್ಞಾನೇಶ್ ಪನೆಯಾಲ, ಸುಂದರ ಕಮ್ಮಾಡಿ ಇವರನ್ನು ಆಯ್ಕೆ ಮಾಡಲಾಯಿತು. ಫಾರೆಸ್ಟರ್ ಶೇಷಪ್ಪ ಇವರು ಸ್ವಾಗತಿಸಿ,ವಿನೀತ್ ವಂದಿಸಿದರು.