ಅರಂತೋಡು: ಅರಂತೋಡು- ತೊಡಿಕಾನ ಪ್ರಾಥಮಿಕ ಕೃಷಿ ಪತ್ತನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಡಿ.28ರಂದು ನಡೆಯಲಿದೆ. ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಎಲ್ಲಾ 12 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಾಮಾನ್ಯ ಕ್ಷೇತ್ರದಿಂದ
ಹಾಲಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಹಾಲಿ ಉಪಾಧ್ಯಕ್ಷ ದಯಾನಂದ ಕುರುಂಜಿ, ಚಂದ್ರಶೇಖರ ಚೋಡಿಪಣೆ, ಶಿವಾನಂದ ಕುಕ್ಕುಂಬಳ, ಉದಯಕುಮಾರ್ ಉಳುವಾರು ಸ್ಪರ್ಧಿಸುತ್ತಿದ್ದಾರೆ. ಮಹಿಳಾ ಮೀಸಲು

ಕ್ಷೇತ್ರದಿಂದ ಶ್ರೀಲತಾ ದೇರಾಜೆ, ಲೋಚನ ಕೊಳಲುಮೂಲೆ ಸ್ಪರ್ಧಿಸುತ್ತಿದ್ದಾರೆ. ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಚಂದ್ರಶೇಖರ ಎ.ಎಸ್, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನಕ್ಕೆ ಡಾ.ಲಕ್ಷ್ಮೀಶ ಕಲ್ಲುಮುಟ್ಲು, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ದಿನೇಶ್ ಅರಮನೆಗಯ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಪದ್ಮಯ್ಯ ಅಡ್ಯಡ್ಕ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಶಾಂತ ಕಾಪಿಲ ಸ್ಪರ್ಧಿಸುತ್ತಿದ್ದಾರೆ. ಡಿ.28 ರಂದು ಪೂ.9ರಿಂದ ಸಂಜೆ 4ರ ತನಕ ತೆಕ್ಕಿಲ್ ಸಮುದಾಯ ಭವನದಲ್ಲಿ ಚುನಾವಣೆ ನಡೆಯಲಿದೆ.