ಅರಂತೋಡು: ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಿರಿಸೌಧ ಸಭಾಂಗಣದಲ್ಲಿ ನಡೆಯಿತು.ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ
214 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, 23.5 ಲಕ್ಷ ನಿವ್ವಳ ಲಾಭ ಶೇ. 5.25 ಡಿವಿಡೆಂಡ್ ಈ ಬಾರಿ ಸದಸ್ಯರಿಗೆ ನೀಡಲಾಗುವುದು ಎಂದು
ಹೇಳಿದರು. ಭವಾನಿಶಂಕರ ಅಡ್ತಲೆ, ಕೆ.ಆರ್. ಗಂಗಾಧರ, ಅಶ್ರಫ್ ಗುಂಡಿ, ಶಿವಾನಂದ ಕುಕ್ಕುಂಬಳ ಮತ್ತಿತರರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರುಗಳ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಪೋತ್ಸಾಹಧನ ವಿತರಿಸಲಾಯಿತು. ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿದ ಕ್ರೀಡಾಪ್ರತಿಭೆಗಳಿಗೆ, ಗ್ರಾಮ ಪಂಚಾಯತಿ ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿಗಳಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಸಮೃದ್ಧಿ ಮಾರ್ಟ್ ನಲ್ಲಿ ಅತೀ ಹೆಚ್ಚು ವ್ಯವಹಾರ ನಡೆಸಿದ ಗ್ರಾಹಕರಿಗೆ ಗೌರವಾರ್ಪಣೆ ಮಾಡಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ನಿರ್ದೇಶಕ ಕುಸುಮಾಧರ ಅಡ್ಕಬಳೆ ವಂದಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ನಿರ್ದೇಶಕರುಗಳಾದ ವಿನೋದ್ ಕುಮಾರ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಎ, ಸಂತೋಷ್ ಚಿಟ್ಟನ್ನೂರು,ಭಾರತಿ ಪಿ., ಚಿತ್ರಾ ಶಶಿಧರ ದೇರಾಜೆ, ಸೋಮಯ್ಯ ಹೆಚ್., ಗಣೇಶ್ ಕರಿಂಬಿ, ವಿಜೇತ್ ಮರುವಳ, ಕೇಶವ ಅಡ್ತಲೆ, ಸಂಘದ ಆಂತರಿಕ ಲೆಕ್ಕ ಪರಿಶೋಧಕ ಅನಂತ ಕೃಷ್ಣ ಚಾಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.