ಹಾಂಗ್ಝೌ:ಏಷ್ಯನ್ ಗೇಮ್ಸ್ನಲ್ಲಿ ಭಾರತ ಮೊದಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಏಷ್ಯನ್ ಗೇಮ್ಸ್ನಲ್ಲಿ ಪುರುಷರ 10 ಮೀಟರ್ಸ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತ ತಂಡವು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದಿದೆ..ವಿಶ್ವ ಚಾಂಪಿಯನ್ ರುದ್ರಂಕ್ಷ್ ಬಿ. ಪಾಟೀಲ, ದಿವ್ಯಾಂಶ್ ಸಿಂಗ್ ಪನ್ವಾರ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ತಂಡವು ಅರ್ಹತಾ
ಸುತ್ತಿನಲ್ಲಿ 1893.7 ಅಂಕ ಗಳಿಸಿತು ವಿಶ್ವ ದಾಖಲೆ ನಿರ್ಮಿಸಿತು. ದಕ್ಷಿಣ ಕೊರಿಯಾ 1890.1 ಅಂಕಗಳೊಂದಿಗೆ ಬೆಳ್ಳಿ ಗೆದ್ದರೆ, ಚೀನಾ 1888.2 ಅಂಕಗಳೊಂದಿಗೆ ಕಂಚು ಗೆದ್ದಿತು.ಭಾರತದ ಪರ ರುದ್ರಂಕ್ಷ್ 632.5, ತೋಮರ್ 631.6 ಮತ್ತು ಪನ್ವಾರ್ 629.6 ಅಂಕಗಳನ್ನು ಗಳಿಸಿ ವಿಶ್ವ ದಾಖಲೆಯ ಅಂಕ ಗಳಿಸಿದರು.
ಏಷ್ಯನ್ ಗೇಮ್ಸ್ನ ಪುರುಷರ ರೋಯಿಂಗ್ ಫೈನಲ್ನಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸಿದೆ.ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್, ಆಶಿಶ್ ಕುಮಾರ್ ಅವರನ್ನು ಒಳಗೊಂಡ ಭಾರತದ ರೋಯಿಂಗ್ ತಂಡ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.
ಭಾರತ ತಂಡ 6:10.81 ಸೆಕೆಂಡ್ನಲ್ಲಿ ಗುರಿ ತಲುಪಿ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಚೀನಾ 6:10.04 ಸೆಕೆಂಡ್ನಲ್ಲಿ ಚಿನ್ನದ ಪದಕ ಗೆದ್ದುಕೊಂಡರೆ, ಉಜ್ಬೇಕಿಸ್ತಾನ್ 6:04.96 ಸೆಕೆಂಡ್ನಲ್ಲಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.