ಅರಂತೋಡು: ಬಹು ದಿನಗಳಿಂದ ಕೆಲಸ ಪೂರ್ತಿಯಾಗಿ ಕಾರ್ಯ ಆರಂಭಮಾಡದೆ ನೆನೆಗುದಿಗೆ ಬಿದ್ದಿದ್ದ ಅರಂತೋಡು ಗ್ರಾಮದ ದೇರಾಜೆ ಬಿಎಸ್ಎನ್ಎಲ್ ಟವರ್ ಕಾರ್ಯಾರಂಭ ಮಾಡಿದೆ. ಬಿಎಸ್ಎನ್ಎಲ್ ಸಮಸ್ಯೆಯನ್ನು ಆರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ
ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಸಂಸದರು ಒಂದೇ ದಿನದಲ್ಲಿ ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ತಂದು ಟವರ್ ಕಾರ್ಯಾರಂಭ ಮಾಡಿಸಿದ್ದಾರೆ.ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಲ್ಲಿ ನಿರ್ಮಾಣವಾಗಿರುವ ಬಿಎಸ್ಎನ್ಎಲ್ ಟವರ್ ಗಳನ್ನು ಕಾರ್ಯಾರಂಭ ಮಾಡಲು ಮತ್ತು ಆದ್ಯತೆಯ ಮೇಲೆ ಹಳೆ ಬಿಎಸ್ಎನ್ಎಲ್ ಟವರ್ ಗಳಿಗೆ ಬ್ಯಾಟರಿ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಮಸ್ಯೆಯನ್ನು ಸಂಸದರ ಗಮನಕ್ಕೆ ತಂದ ಆರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ ಅವರಿಗೆ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಕೇಶವ ಅಡ್ತಲೆ ಮತ್ತು ಮಾಜಿ ಅಧ್ಯಕ್ಷೆ ಹರಿಣಿ ದೇರಾಜೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.