ಸುಳ್ಯ:ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಮತ್ತು ಅಮರಮುಡ್ನೂರು ಗ್ರಾಮ ಪಂಚೀಯತ್ ಸಹಕಾರದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಅಮರಮುಡ್ನೂರು ಪಂಚಾಯತ್ ಸಭಾಭವನ ಕುಕ್ಕುಜಡ್ಕದಲ್ಲಿ ನಡೆಯಿತು. ಶಾಶಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು
ಉದ್ಘಾಟಿಸಿದರು. ಅಮರ ಸಂಘಟನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಕಂದಡ್ಕ, ಪಂಚಾಯತ್ ಉಪಧ್ಯಾಕ್ಷೆ ಭುವನೇಶ್ವರಿ , ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಇಟ್ಟಿಗುಂಡಿ , ರಾಧಕೃಷ್ಣ ಕೋರತ್ಯಡ್ಕ , ಕೃಷ್ಣಪ್ರಸಾದ್ ಮಾಡಬಾಕೀಲು ಜನಾರ್ಧನ ಪೈಲೂರು, ದಿವ್ಯ ಮಡಪ್ಪಾಡಿ , ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕೇಶವ ಕರ್ಮಜೆ , ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಹರಿಶ್ಚಂದ್ರ ಗೌಡ ಮೋಂಟಡ್ಕ ,ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ಕೃಷ್ಣಪ್ಪ ಗೌಡ ಕೊಡ್ತುಗುಳಿ, ಅರಂತೋಡು ಆಧಾರ್ ಕೇಂದ್ರದ ನೀಶಾ , ನೆಟ್ಟಣ ಆಧಾರ್ ಕೇಂದ್ರದ ಶೃುತಿ ಇವರುಗಳು ಉಪಸ್ಥಿತರಿದ್ದರು. ನೂರ ಇಪ್ಪತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದರು. ಅಮರ ಸಂಘಟನಾ ಸಮಿತಿಯ ಸ್ಥಾಪಕಧ್ಯಕ್ಷ ಪ್ರದೀಪ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು. ಅಮರ ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಹಕರಿಸಿದರು.
















