ಡಲ್ಲಾಸ್: ಫಿಫಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಎದುರು 2 – 0 ಗೋಲು ಅಂತರದ ಜಯ ಸಾಧಿಸಿದ ಸ್ಪೇನ್ ಫೈನಲ್ಗೆ ಲಗ್ಗೆ ಇಟ್ಟಿತು. ಇದರೊಂದಿಗೆ ಸತತ ಮೂರನೇ ಬಾರಿಗೆ ಅಂತಿಮ ಸುತ್ತು ಪ್ರವೇಶಿಸುವ ಕಿಲಿಯನ್ ಎಂಬಾಪೆ ಬಳಗದ
ಕನಸು ನುಚ್ಚು ನೂರಾಯಿತು.ಮೊದಲಾರ್ಧದ 22 ನೇ ನಿಮಿಷದಲ್ಲಿ ಮಿಕ್ಕೆಲ್ ಒಯರ್ಜಾಬಲ್ ಪೆನಾಲ್ಟಿ ಗೋಲು ಮೂಲಕ ಸ್ಪೇನ್ ತಂಡಕ್ಕೆ ಮುನ್ನಡೆ ಒದಗಿಸಿದರು. ದ್ವಿತೀಯಾರ್ಧದ 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಅವರ ಗೋಲು ಮೂಲಕ ಮತ್ತೊಂದು ಗೋಲುಗಳಿಸಿ ಗೆಲುವನ್ನು ಖಾತ್ರಿ ಪಡಿಸಿತು.2010ರ ಬಳಿಕ ಮತ್ತೆ ಸ್ಪೇನ್ ಫೈನಲ್ ಪ್ರವೇಶಿಸಿದೆ.







