ಸಂಪಾಜೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ನರವಾಡೆ ವಿನಾಯಕ್ ಕಾರ್ಬಾರಿ ಸುಳ್ಯ ತಾಲೂಕಿಗೆ ಜು.23ರಂದು ಭೇಟಿ ನೀಡಿದರು. ಸಂಪಾಜೆ ಗ್ರಾಮ ಪಂಚಾಯತ್ಗೆ ಆಗಮಿಸಿದ ಅವರು ಕಾಮಗಾರಿ ವೀಕ್ಷಣೆ ಮಾಡಿದರು. ಗೂನಡ್ಕ ಕುಡಿಯುವ ನೀರಿನ ಟ್ಯಾಂಕ್, ಕುಡಿಯುವ ನೀರಿನ
ಮೀಟರ್ ಪರಿಶೀಲನೆ ನಡೆಸಿ. ಮೀಟರ್ ದರದಲ್ಲಿ 24 ಗಂಟೆಗಳ ನೀರು ಪೂರೈಕೆ ಮಾಡುವ ಬಗ್ಗೆ ಮಾಹಿತಿ ಪಡೆದರು. ಕುಡಿಯುವ ನೀರಿನ ಮೀಟರ್ ಮೂಲಕ ದರ ನಿಗದಿ ಮಾಡುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಬದಲ್ಲಿ ಜಿಲ್ಲಾ ಪಂಚಾಯತ್ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರಘು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ , ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷ ಎಸ್.ಕೆ.ಹನೀಫ್, ಕುಡಿಯುವ ನೀರು ವಿಭಾಗದ
ಸಹಾಯಕ ಅಭಿಯಂತರರಾದ ಚೈತ್ರಾ, ಇಂಜಿನಿಯರ್ ವಿಭಾಗದ ಮಣಿಕಂಠ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಸುಂದರಿ ಮುಂಡಡ್ಕ, ಸದಸ್ಯರಾದ ವಿಮಲಾ ಪ್ರಸಾದ್, ಲಿಸ್ಸಿ ಮೊನಾಲಿಸಾ, ಅಬುಸಾಲಿ, ಪಂಚಾಯತ್ ಅಭಿವೃದ್ಧಿ ಆಧಿಕಾರಿ ಸರಿತಾ ಡಿಸೋಜಾ, ಪ್ರಶಾಂತ್ ವಿ. ವಿ ಬಾಲಚಂದ್ರ, ಶರತ್ ಹಾಗೂ ಫಲಾನುಭವಿ ಅಬ್ಬಾಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರುಗಳು ಗ್ರಾಮ ಮಟ್ಟದಲ್ಲಿ ಸಾರ್ವಜನಿಕ ಬಾವಿ ಹೂಳೆತ್ತುವ ಬಗ್ಗೆ. ಗ್ರಾಮ ಮಟ್ಟದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಅನುಧಾನ ಒದಗಿಸುವ ಬಗ್ಗೆ ವಿನಂತಿ ಮಾಡಲಾಯಿತು.














