ಸುಳ್ಯ: ಸುಳ್ಯ ನಗರ ಸಮೀಪದ ಅರಂಬೂರಿನಲ್ಲಿ ಕಾಡಾನೆಗಳ ಹಿಂಡು ಕಂಡು ಬಂದಿದೆ. ಇಂದು ಬೆಳಿಗ್ಗೆ 6-7 ಆನೆಗಳು ರಸ್ತೆ ದಾಟುವ ದೃಶ್ಯ ಯಾರೋ ವಾಹನ ಸವಾರರು ಸೆರೆ ಹಿಡಿದಿದ್ದು ವೀಡಿಯೋ ವೈರಲ್ ಆಗಿದೆ. ಅರಂಬೂರು ಸಮೀಪದ ಅರಣ್ಯ ಇಲಾಖೆಯ ಡಿಪ್ಪೊ ಬಳಿಯಲ್ಲಿ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗಿನ ಜಾವ ಮರಿಗಳು ಸೇರಿದಂತೆ 6-7 ಆನೆಗಳ ಹಿಂಡು ರಸ್ತೆ ದಾಟುತ್ತಿರುವ ದೃಶ್ಯ ಎಂದು ಹೇಳಲಾಗಿದೆ. ಅರಂಬೂರು, ಪರಿವಾರಕಾನ ಸೇರಿದಂತೆ ಆಲೆಟ್ಟಿ ಗ್ರಾಮದ ವಿವಿಧ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳು ಕೃಷಿ ಹಾನಿ ಮಾಡುತ್ತಿವೆ. ಇದೀಗ ಆನೆಗಳು ರಸ್ತೆ ದಾಟಿ ಪೂಮಲೆ ಕಾಡಿನತ್ತ ತೆರಳಿವೆ. ಆನೆಗಳ ಹಿಂಡು ಕಾಡಿನ ಭಾಗಕ್ಕೆ ತೆರಳಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.